ಉಪ್ಪಳ: ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ 2001-2002ನೇ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸೆಲ್‍ಸಿ ಪೂರೈಸಿದ ವಿದ್ಯಾರ್ಥಿಗಳ ಸಮಾವೇಶ ಮತ್ತು ಗುರುಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ಶಾಲಾ ಸಭಾಂಗಣ ದಲ್ಲಿ ಜರುಗಿತು.
2000-2002ನೇ ಸಾಲಿನಲ್ಲಿ ಮುಖ್ಯಶಿಕ್ಷಕ ಮುಹಮ್ಮದ್ ಯಾಕೂಬ್ ಸಮಾರಂಭ ಉದ್ಘಾಟಿಸಿದರು. ಅಂದಿನ ತರಗತಿ ಅಧ್ಯಾಪಕ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ವಾಸುದೇವ, ಪ್ರದೀಪ್, ಶಾಂತ ಕುಮಾರಿ ಟೀಚರ್, ವಾರಿಜಾ, ಮನೋರಮ, ರಾಧಾಕೃಷ್ಣ, ಹಮೀದ್ ತಮ್ಮ ಅನುಭವ ಹಂಚಿಕೊಂಡರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕ ರಾಜೇಶ್ ಮಾತನಾಡಿ ಶಾಲಾ ಅಭಿವೃದ್ಧಿಯಲ್ಲಿ ಹಳೇ ವಿದ್ಯಾರ್ಥಿಗಳ ಕೊಡುಗೆ ಅಪಾರ ಮತ್ತು ಅಮೂಲ್ಯ ವಾದುದು ಎಂದು ಹೇಳಿದರು. ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಫೀಕ್ ಮಾಸ್ಟರ್ ಪೈವಳಿಕೆ ಸ್ವಾಗತಿಸಿದರು. ಮಂಜುನಾಥ್ ಬಾಯಿಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ್ ಪೈವಳಿಕೆ ವಂದಿಸಿದರು. ಈ ಸಂದರ್ಭ ಮನೋರಂಜನಾ ಕಾರ್ಯಕ್ರಮ ನಡೆಯಿತು.





