ಕೀವ್: ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದಿಂದ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಪ್ರಸ್ತಾವವನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಮತ್ತೆ ಇಟ್ಟಿದ್ದಾರೆ.
ಆದರೆ, ಮುಖಾಮುಖಿ ಚರ್ಚೆಗೆ ಸಂಬಂಧಿಸಿದಂತೆ ಈ ಹಿಂದೆ ಝೆಲೆನ್‌ಸ್ಕಿ ಅವರು ಮುಂದಿಟ್ಟಿದ್ದ ಪ್ರಸ್ತಾವಗಳನ್ನು ಪುಟಿನ್ ತಿರಸ್ಕರಿಸಿದ್ದರು.
'ಉಕ್ರೇನ್ ಎಂದಿಗೂ ಯುದ್ಧವನ್ನು ಬಯಸಿರಲಿಲ್ಲ. ರಷ್ಯಾ ಆರಂಭಿಸಿದ ಈ ಯುದ್ಧವನ್ನು ಅದೇ ಕೊನೆಗೊಳಿಸಬೇಕು' ಎಂದು ಝೆಲೆನ್‌ಸ್ಕಿ ಟೆಲಿಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಏತನ್ಮಧ್ಯೆ, ರಷ್ಯಾದ ಪಡೆಗಳು ಸೋಮವಾರ ರಾತ್ರಿ ಉಕ್ರೇನ್‌ನ ನಗರಗಳ ಮೇಲೆ ದಾಳಿ ನಡೆಸಿದ್ದು, ಒಂದು ಮಗು ಮೃತಪಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.




