ಕೊಟ್ಟಾಯಂ: ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹದಿನಾಲ್ಕನೇ ವಾರ್ಡ್‍ನ ಒಂದು ಭಾಗ ಕುಸಿದಿದೆ.
ಮೂರು ಅಂತಸ್ತಿನ ಹಳೆಯ ಕಟ್ಟಡ ಬೆಳಿಗ್ಗೆ 11 ಗಂಟೆ ಸುಮಾರಿಗೆ ಕುಸಿದಿದೆ. ಒಂದು ಮಗು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿಲ್ಲ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಟ್ಟಡವು ತುಂಬಾ ಹಳೆಯದಾಗಿದ್ದು, ಪ್ರಸ್ತುತ ಬಳಕೆಯಲ್ಲಿಲ್ಲ. ಈ ಹಿಂದೆ, ಶಸ್ತ್ರಚಿಕಿತ್ಸೆ ಮತ್ತು ಮೂಳೆಚಿಕಿತ್ಸಾ ವಿಭಾಗವು ಇಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಅಪಘಾತದ ನಂತರ, ವಾರ್ಡ್‍ನ ಇತರ ಭಾಗಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.
ಪೋಲೀಸರ ಆರಂಭಿಕ ತೀರ್ಮಾನವೆಂದರೆ ಕಟ್ಟಡದೊಳಗೆ ಯಾರೂ ಸಿಲುಕಿಕೊಂಡಿಲ್ಲ. ಶೌಚಾಲಯವೂ ಈ ಕಟ್ಟಡದಲ್ಲಿದೆ. ಪೆÇಲೀಸರು ಸ್ಥಳದಲ್ಲಿ ತನಿಖೆ ಮುಂದುವರಿಸಿದ್ದಾರೆ. ಸಚಿವ ವಿ.ಎನ್. ವಾಸವನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಸ್ಪತ್ರೆಯ ಹದಿನಾಲ್ಕನೇ ವಾರ್ಡ್ ಕುಸಿದಿದೆ. ಆಸ್ಪತ್ರೆಯಲ್ಲಿ ಬಳಸದೆ ಉಳಿದಿದ್ದ ಕಟ್ಟಡ ಕುಸಿದಿದೆ ಎಂದು ಸಚಿವ ವಿ.ಎನ್. ವಾಸವನ್ ಹೇಳಿದ್ದಾರೆ. ಪೋಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳದಲ್ಲಿದ್ದು, ಮುಂದಿನ ಕ್ರಮ ಕೈಗೊಂಡರು. ಕುಸಿದ ಕಟ್ಟಡದ ಅವಶೇಷಗಳ ಅಡಿಯಲ್ಲಿ ಯಾರೂ ಸಿಲುಕಿಲ್ಲ ಎಂಬುದು ಪೋಲೀಸರ ಆರಂಭಿಕ ತೀರ್ಮಾನ.



