HEALTH TIPS

ಮಗುವಿನ ಹೊಟ್ಟೆ ಉಬ್ಬರ ಸಮಸ್ಯೆಗೆ ಕಾದ ಕಬ್ಬಿಣದ ಸರಳಿಂದ ಬರೆ ಹಾಕಿದ ಮಹಿಳೆ ವಶಕ್ಕೆ

ನಾಗ್ಪುರ: ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ 10 ದಿನಗಳ ಹೆಣ್ಣು ಮಗುವಿನ ಹೊಟ್ಟೆ ಉಬ್ಬರಕ್ಕೆ ಚಿಕಿತ್ಸೆ ಎಂದು ಕಾದ ಕಬ್ಬಿಣದ ರಾಡ್‌ನಿಂದ ಬರೆ ಹಾಕಿದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಶುಕ್ರವಾರ ಈ ವಿಷಯ ಬೆಳಕಿಗೆ ಬಂದ ನಂತರ ಮಹಿಳೆಯನ್ನು ಬಂಧಿಸಲಾಗಿದೆ.

ಆಕೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಮಹಾರಾಷ್ಟ್ರ ಮಾನವ ಬಲಿದಾನ ಮತ್ತು ಇತರ ಅಮಾನವೀಯ, ದುಷ್ಟ, ಅಘೋರಿ ಪದ್ಧತಿಗಳು, ಮಾಟಮಂತ್ರಗಳ ತಡೆಗಟ್ಟುವಿಕೆ ಮತ್ತು ನಿರ್ಮೂಲನೆ ಕಾಯ್ದೆಯ ಸೆಕ್ಷನ್ 118 (1) (ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ನೋವು ಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಜೂನ್ 15ರಂದು ಅಮರಾವತಿ ಜಿಲ್ಲೆಯ ಚಿಕಲ್ದಾರಾದ ದಹೇಂದ್ರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಗು ಜನಿಸಿತ್ತು. ಜನನದ ಸುಮಾರು ಒಂದು ವಾರದ ನಂತರ ಮಗು ಅನಾರೋಗ್ಯಕ್ಕೆ ಒಳಗಾಗಿತ್ತು. ಆರೋಗ್ಯ ಕೇಂದ್ರದ ಸಿಬ್ಬಂದಿ ಮಗುವಿಗೆ ಚಿಕಿತ್ಸೆ ನೀಡಿದ್ದರು.

ಈ ಸಮಯದಲ್ಲಿ ಮಗುವನ್ನು ನೋಡಲು ಬಂದಿದ್ದ ಮಗುವಿನ ತಾಯಿಯ ಚಿಕ್ಕಮ್ಮ, ಮಗುವಿಗೆ ಹೊಟ್ಟೆ ಉಬ್ಬರ ಸಮಸ್ಯೆ ಇದೆ ಎಂದು ಕುಟುಂಬಕ್ಕೆ ತಿಳಿಸಿ, ಜಿಲ್ಲೆಯ ಬುಡಕಟ್ಟು ಮೆಲ್ಘಾಟ್ ಪ್ರದೇಶದಲ್ಲಿ ಪ್ರಚಲಿತದಲ್ಲಿರುವ 'ದಮ್ಮಾ'ವನ್ನು ಮಾಡಬೇಕೆಂದು ಸೂಚಿಸಿದ್ದರು ಎಂದು ಚಿಕಲ್ದಾರಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಳಿಕ, ಆ ಮಹಿಳೆ ಕಾದ ಕಬ್ಬಿಣದ ಸರಳಿನಿಂದ ಮಗುವಿನ ಹೊಟ್ಟೆ ಮೇಲೆ ಬರೆ ಹಾಕಿದ್ದಾಳೆ.

ಶುಕ್ರವಾರ ಮಗುವಿನ ಆರೋಗ್ಯ ವಿಚಾರಿಸಲು ಮನೆಗೆ ತೆರಳಿದ ಆರೋಗ್ಯ ಕೇಂದ್ರದ ಸಿಬ್ಬಂದಿ ಮಗುವಿಗೆ ಬರೆ ಹಾಕಿರುವುದನ್ನು ಗಮನಿಸಿದ್ದಾರೆ. ಕೂಡಲೇ ಮಗುವನ್ನು ಚಿಕಿತ್ಸೆಗಾಗಿ ಅಚಲ್ಪುರದ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಚಿಕಿತ್ಸೆ ಬಳಿಕ ಮಗು ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದೆ.

ಮಹಿಳೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries