ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಇಂದು ಶ್ರೀಮಠದ ಗಾಯತ್ರೀ ಮಂಟಪದಲ್ಲಿ "ಕಾರ್ಗಿಲ್ ವಿಜಯ್ ದಿವಸ್" ಆಚರಣೆ ನಡೆಯಲಿದೆ.
ಬೆಳಿಗ್ಗೆ 10ಕ್ಕೆ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅಮರ್ ಜವಾನ್ ಜ್ಯೋತಿ ಬೆಳಗುವರು. ಬಳಿಕ ಪುಷ್ಪಾರ್ಚನೆ, ನಂತರ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ನೃತ್ಯ ರೂಪಕ, ಸ್ವಾಮೀಜಿಯವರಿಂದ ಆಶೀರ್ವಚನ ನಡೆಯಲಿದೆ.
ಸಭೆಯ ಅಧ್ಯಕ್ಷತೆಯನ್ನು ಉದ್ಯಮಿ ಶಶಿಧರ ಶೆಟ್ಟಿ ಬರೋಡ ವಹಿಸುವರು. ಸುವರ್ಣ ಟಿ.ವಿಯ ಸುದ್ದಿ ಸಂಪಾದಕ ಅಜಿತ್ ಹನುಮಕ್ಕನವರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ವೀರ ಯೋಧ ಹವಾಲ್ದಾರ್ ಜೋನಿ ಮ್ಯಾಥ್ಯೂ, ರಾಜಪುರಂ ಇವರನ್ನು ಸನ್ಮಾನಿಸಲಾಗುವುದು. ಬ್ರಿಗೇಡಿಯರ್ ಐ.ಎನ್.ರೈ, ಕುಂಬ್ಳೆ(ನಿವೃತ್ತ ಯೋಧ), ಕಮಾಂಡರ್ ಕೆ ವಿಜಯ ಕುಮಾರ್ ಕಣ್ವತೀರ್ಥ(ನಿವೃತ್ತ ಸೇನಾನಿ ನೌಕಾದಳ), ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಂಗಳೂರು (ನಿವೃತ್ತ ಯೋಧ), ಸುರೇಶ್ ಹೆಗ್ಡೆ ಇವರುಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಶ್ರೀ ಮಠದಲ್ಲಿ ನಡೆದ ಸೈನಿಕ ತರಬೇತಿ ಶಿಬಿರದಲ್ಲಿ ಸೈನ್ಯಕ್ಕೆ ಆಯ್ಕೆಯಾದ ಯೋಧರ ಮಾತಾಪಿತರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳಲ್ಲಿ ದೇಶ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಶ್ರೀ ಮಠದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.





