HEALTH TIPS

ತಮ್ಮದೇ ಒಡೆತನದ ಖಾಸಗಿ ಅಭಯಾರಣ್ಯದಲ್ಲಿ ಆನೆ ದಾಳಿಯಿಂದ ಮೃತಪಟ್ಟ ಉದ್ಯಮಿ

ಆಫ್ರಿಕಾ: ದಕ್ಷಿಣ ಆಫ್ರಿಕಾದ ಕೇಪ್‌ ಟೌನ್ ಬಳಿಯ ತಮ್ಮದೇ ಸಹಒಡೆತನದ ಖಾಸಗಿ ಅಭಯಾರಣ್ಯದಲ್ಲಿ ಉದ್ಯಮಿಯೊಬ್ಬರು ಆನೆ ದಾಳಿಯಿಂದ ಮೃತಪಟ್ಟಿರುವ ಘಟನೆ ನಡೆದಿದೆ.

ಫ್ರಾಂಕೋಯಿಸ್ ಕ್ರಿಶ್ಚಿಯನ್ ಕಾನ್ರಾಡಿ (39) ಮೃತ ದುರ್ದೈವಿ. ಅವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

ಗೊಂಡವಾನಾ ಎಂಬ ಖಾಸಗಿ ಅಭಯಾರಣ್ಯದಲ್ಲಿ (private game reserves) ಜುಲೈ 22 ರಂದು ಬೆಳಿಗ್ಗೆ ಕಾನ್ರಾಡಿ ಅವರು ರೆಸಾರ್ಟ್‌ ಕೋಣೆ ಬಳಿ ಬಂದಿದ್ದ ಆನೆಗಳನ್ನು ಓಡಿಸಲು ಮುಂದಾದರು. ಈ ವೇಳೆ ದೊಡ್ಡ ಆನೆಯೊಂದು ಕಾನ್ರಾಡಿ ಅವರ ಮೇಲೆ ದಾಳಿ ಮಾಡಿ ದಂತದಿಂದ ತಿವಿದು ಕಾಲಿನಿಂದ ತುಳಿದು ಸಾಯಿಸಿದೆ. ಸಿಬ್ಬಂದಿ ಕಾನ್ರಾಡಿ ಅವರನ್ನು ಉಳಿಸಲು ಸಾಕಷ್ಟು ಪ್ರಯತ್ನಪಟ್ಟರೂ ಕೆರಳಿದ್ದ ಆನೆ ಆ ಸಿಬ್ಬಂದಿಯನ್ನು ಬಳಿ ಬರಲು ಬಿಡಲಿಲ್ಲ ಎಂದು ವರದಿಯಾಗಿದೆ.

ಈ ಕುರಿತು ಗೊಂಡವಾನಾ ಪ್ರೈವೇಟ್ ಗೇಮ್ ರಿಸರ್ವ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿರುವುದಾಗಿ ಎನ್‌ಡಿಟಿವಿ ವೆಬ್‌ಸೈಟ್ ವರದಿ ಮಾಡಿದೆ.

ಕಾನ್ರಾಡಿ ಅವರು ಗೊಂಡವಾನಾ ಎಂಬ ಖಾಸಗಿ ಅಭಯಾರಣ್ಯದ ಸಿಇಒ ಹಾಗೂ ಸಹ ಮಾಲೀಕರಾಗಿದ್ದರು. Caylix Group ಎಂಬ ಬಹುಕೋಟಿ ಮೌಲ್ಯದ ಸ್ಪೋರ್ಟ್ ಮ್ಯಾನೇಜ್‌ಮೆಂಟ್ ಕಂಪನಿಯ ಮುಖ್ಯಸ್ಥರೂ ಆಗಿದ್ದರು.

ದಕ್ಷಿಣ ಆಫ್ರಿಕಾ ಸೇರಿದಂತೆ ಆಫ್ರಿಕಾ ಖಂಡದ ಅನೇಕ ದೇಶಗಳಲ್ಲಿ ಖಾಸಗಿ ಅಭಯಾರಣ್ಯಗಳ ಪರಿಕಲ್ಪನೆಯಿದ್ದು ಇವು ಸರ್ಕಾರಿ ಒಡೆತನದ ರಾಷ್ಟ್ರೀಯ ಅಭಯರಾಣ್ಯಗಳಿಗಿಂತಲೂ ಭಿನ್ನವಾಗಿರುತ್ತವೆ. ಇಲ್ಲಿಗೆ ಬರುವವರು ಬಹುತೇಕರು ಜಗತ್ತಿನ ಶ್ರೀಮಂತ ವ್ಯಕ್ತಿಗಳು, ಅಪಾರ ದುಡ್ಡಿರುವವರೇ ಆಗಿರುತ್ತಾರೆ. ಅಥವಾ ಹೆಚ್ಚು ದುಡ್ಡು ತೆತ್ತು ಈ ಅಭಯಾರಣ್ಯಗಳಲ್ಲಿ ವಿಶೇಷ ಸಫಾರಿ ಅನುಭವವನ್ನು ಪಡೆಯುತ್ತಾರೆ. ವಸತಿ, ಊಟ, ವಾಹನ ಹಾಗೂ ಇನ್ನೀತರ ಸೇವೆಗಳು ಐಷಾರಾಮಿತನದಿಂದ ಕೂಡಿರುತ್ತವೆ. ಖಾಸಗಿಯವರು ಅಭಯಾರಣ್ಯದ ಸಂರಕ್ಷಣೆಯ ಗುತ್ತಿಗೆಯ ಜೊತೆ ಈ ರೀತಿಯ ಉದ್ಯಮವನ್ನೂ ಅಲ್ಲಿ ಮುನ್ನಡೆಸುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries