ತಿರುವನಂತಪುರಂ: ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ರಾಜ್ಯದಲ್ಲಿ ಪ್ಲಸ್ ಒನ್ ಮತ್ತು ಪ್ಲಸ್ ಟು ವಿದ್ಯಾರ್ಥಿಗಳಿಗೆ ಎಚ್.ಪಿ.ವಿ. ಲಸಿಕೆ ಹಾಕುವುದನ್ನು ಪ್ರಾರಂಭಿಸಲಾಗುವುದು ಎಂದು ಆರೋಗ್ಯ ಇಲಾಖೆ ಪ್ರಕಟಿಸಿದೆ.
ಲಸಿಕೆ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲು ಒಂದು ವಾರದೊಳಗೆ ತಾಂತ್ರಿಕ ಸಮಿತಿ ಸಭೆ ನಡೆಯಲಿದೆ. ಮಹಿಳೆಯರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಕ್ಯಾನ್ಸರ್‍ಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಒಂದಾಗಿದೆ. ಎಚ್.ಪಿ.ವಿ. ಲಸಿಕೆ 9 ರಿಂದ 14 ವರ್ಷ ವಯಸ್ಸಿನ ನಡುವೆ ಹೆಚ್ಚು ಪರಿಣಾಮಕಾರಿಯಾಗಿದೆ. ಏತನ್ಮಧ್ಯೆ, ಎಚ್.ಪಿ.ವಿ. ಲಸಿಕೆಯನ್ನು 26 ವರ್ಷ ವಯಸ್ಸಿನವರೆಗೆ ನೀಡಬಹುದು. ಗರ್ಭಕಂಠದ ಕ್ಯಾನ್ಸರ್ ಅನ್ನು ಲಸಿಕೆಯಿಂದ ತಡೆಗಟ್ಟಬಹುದು.
ಎಚ್.ಪಿ.ವಿ. ಲಸಿಕೆ ಕುರಿತು ಜಾಗೃತಿ ಅಭಿಯಾನವನ್ನು ಸಹ ಆಯೋಜಿಸಲಾಗುವುದು. ತಾಂತ್ರಿಕ ಸಮಿತಿಯ ಮಾರ್ಗಸೂಚಿಗಳ ಪ್ರಕಾರ ಜಾಗೃತಿ ಸಂದೇಶಗಳನ್ನು ಸಿದ್ಧಪಡಿಸಲಾಗುವುದು. ಇವರು ಪ್ಲಸ್ ಒನ್ ಮತ್ತು ಪ್ಲಸ್ ಟು ಹಂತದ ಮಕ್ಕಳಾಗಿರುವುದರಿಂದ, ಶಾಲಾ ಮಟ್ಟದಲ್ಲಿ ವಿಶೇಷ ಜಾಗೃತಿ ನೀಡಲಾಗುವುದು. ಇದರೊಂದಿಗೆ, ಪೆÇೀಷಕರಿಗೆ ಜಾಗೃತಿ ಮೂಡಿಸಲಾಗುವುದು.




