ವಾಲ್ ವಾಚ್, ಟೇಬಲ್ ವಾಚ್, ಹ್ಯಾಂಡ್ ವಾಚ್ ಹೀಗೆ ಗಡಿಯಾರದಲ್ಲಿ ಸಾಕಷ್ಟು ವಿಧಗಳಿದೆ. ಈಗಂತೂ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ವಾಚ್ ಧರಿಸುತ್ತಾರೆ. ಆದರೆ ಎಂದಾದರೂ ನೀವು ಎಡಗೈಗೆ ಎಲ್ಲರೂ ವಾಚ್ ಏಕೆ ಧರಿಸುತ್ತಾರೆ? ಎಡಗೈಯಲ್ಲಿ ಮಾತ್ರ ಏಕೆ ಟೈಂ ನೋಡುತ್ತೇವೆ? ಬಲಗೈಗೆ ಏಕೆ ನಾವು ವಾಚ್ ಕಟ್ಟುವುದಿಲ್ಲ ಎಂಬುವುದರ ಬಗ್ಗೆ ಯೋಚಿಸಿದ್ದೀರಾ?
ಸಾಮಾನ್ಯವಾಗಿ ಸಮಯ ನೋಡುವುದಕ್ಕಾಗಿ ವಾಚ್ ಕೈಗೆ ಕಟ್ಟಿಕೊಳ್ಳುತ್ತಾರೆ. ಈಗಂತೂ ವಾಚ್ ಸಮಯ ನೋಡಲು ಮಾತ್ರವಲ್ಲದೆ ಇದೊಂದು ಫ್ಯಾಶನ್‌ನ ಭಾಗವಾಗಿವೆ. ಫ್ಯಾಶನ್‌ಗಾಗಿ ವಾಚ್ ಧರಿಸಿದರೂ ಎಲ್ಲರೂ ಎಡಗೈಗೆಯೇ ವಾಚನ್ನು ಧರಿಸುತ್ತಾರೆ. ಹೀಗೆ ಎಡಗೈಗೆ ಮಾತ್ರ ಏಕೆ ಕೈ ಗಡಿಯಾರವನ್ನು ಧರಿಸುವುದೇಕೆ ಗೊತ್ತಾ? ಇದರ ಹಿಂದಿನ ಕಾರಣವನ್ನು ತಿಳಿಯಿರಿ.
ಕೆಲವರು ವಾಚನ್ನು ಬಲಗೈಗೆ ಧರಿಸಿದರೆ ಬಹುತೇಕ ಹೆಚ್ಚಿನವರು ಎಡಗೈಗೆ ಧರಿಸುತ್ತಾರೆ. ಇದರ ಹಿಂದೆಯೂ ಇಂಟರೆಸ್ಟಿಂಗ್ ಕಾರಣವಿದೆಯಂತೆ ಅದೇನೆಂದರೆ, ಜನರು ಹೆಚ್ಚಾಗಿ ಕೆಲಸಕ್ಕೆ ಬಲಗೈಯನ್ನೇ ಉಪಯೋಗ ಮಾಡ್ತಾರೆ. ಹೀಗೆ ಬಲಗೈ ಹೆಚ್ಚಾಗಿ ಕಾರ್ಯನಿರತವಾಗಿರುವುದರಿಂದ, ಎಡಗೈಯಲ್ಲಿ ವಾಚ್ ಧರಿಸುವುದರಿಂದ ಇದರಿಂದ ನಿಮ್ಮ ದೈನಂದಿನ ದಿನಚರಿಗೆ ಯಾವುದೇ ಅಡಚಣೆ ಉಂಟಾಗುವುದಿಲ್ಲ.ಮಾತ್ರವಲ್ಲದೆ ಇದರಿಂದ ವಾಚ್ ಕೂಡ ಸುರಕ್ಷಿತವಾಗಿರಿಸುತ್ತದೆ ಮತ್ತು ಇದು ಬೀಳುವ ಅಪಾಯವೂ ಕಡಿಮೆ ಇರುತ್ತದೆ. ಉದಾಹರಣೆಗೆ, ಬರೆಯುವುದು, ಟೈಪ್ ಮಾಡುವಂತಹ ಎಲ್ಲಾ ಕೆಲಸಗಳನ್ನು ಮಾಡಲು ಬಲಗೈಯನ್ನು ಬಳಸಿದಾಗ, ವಾಚನ್ನು ಎಡಗೈಗೆ ಧರಿಸುವುದರಿಂದ ಸಮಯ ನೋಡಲು ಸುಲಭವಾಗುತ್ತದೆ.
ಇನ್ನೊಂದು ವೈಜ್ಞಾನಿಕ ಕಾರಣವೆಂದರೆ, ಗೋಡೆ ಮೇಲೆ ನೇತು ಹಾಕುವ ಗಡಿಯಾರದಲ್ಲಿನ ನಂಬರ್ 12 ಮೇಲ್ಮುಖವಾಗಿರುತ್ತದೆ. ಅದೇ ರೀತಿ, ವಾಚನ್ನು ಎಡಗೈಗೆ ಧರಿಸಿದರೆ ಸಂಖ್ಯೆ 12 ಮೇಲ್ಮುಖವಾಗಿಯೇ ಇರುತ್ತದೆ. ಆದರೆ ಬಲಗೈಗೆ ವಾಚ್ ಧರಿಸಿದರೆ ಸಂಖ್ಯೆಗಳ ಕ್ರಮವು ಹಿಮ್ಮುಖವಾಗುತ್ತದೆ ಮತ್ತು ಗಡಿಯಾರವನ್ನು ನೋಡಲು ನಿಮಗೆ ತೊಂದರೆಯಾಗುತ್ತದೆ.




