ಟೆಹರಾನ್: 'ಅಗತ್ಯ ಇಲ್ಲದಿದ್ದರೆ ಇರಾನ್‌ಗೆ ಬರಬೇಡಿ' ಎಂದು ಇಲ್ಲಿನ ಭಾರತೀಯ ರಾಯಭಾರ ಕಚೇರಿ ಭಾರತೀಯರಿಗೆ ಸಲಹೆ ನೀಡಿದೆ. 'ಇರಾನ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಗಮನಹರಿಸಿ, ನಮ್ಮ ಸಲಹೆಗಳನ್ನು ಕಾಲ ಕಾಲಕ್ಕೆ ಅನುಸರಿಸಿ' ಎಂದೂ ಅದು ಹೇಳಿದೆ.
'ಕೆಲವು ವಾರಗಳಿಂದ ಇರಾನ್‌ನಲ್ಲಿ ಭದ್ರತಾ ವಿಚಾರಗಳಿಗೆ ಸಂಬಂಧಿಸಿ ಬೆಳವಣಿಗೆಗಳು ನಡೆಯುತ್ತಿವೆ.
ಒಂದು ವೇಳೆ ಈಗಾಗಲೇ ಇರಾನ್‌ನಲ್ಲಿ ಇದ್ದರೆ, ತಕ್ಷಣವೇ ಇಲ್ಲಿಂದ ವಾಪಸಾಗಿ' ಎಂದಿದೆ. ಕಳೆದ ತಿಂಗಳು ಇರಾನ್ ಮತ್ತು ಇಸ್ರೇಲ್ ನಡುವೆ 12 ದಿನಗಳವರೆಗೆ ಯುದ್ಧ ನಡೆದಿತ್ತು.

