ಇಸ್ಲಾಮಾಬಾದ್ : 'ಈಗ ನಿಷ್ಕ್ರಿಯವಾಗಿರುವ ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘ (ಸಾರ್ಕ್)ಗೆ ಪರ್ಯಾಯವಾಗಿ ಸಂಸ್ಥೆಯನ್ನು ಹುಟ್ಟುಹಾಕುವ ಪ್ರಸ್ತಾವವನ್ನು ಪಾಕಿಸ್ತಾನ, ಚೀನಾ ಸಿದ್ಧಪಡಿಸುತ್ತಿವೆ' ಎಂದು ಮಾಧ್ಯಮವೊಂದು ವರದಿ ಮಾಡಿದೆ.
'ಪ್ರಾದೇಶಿಕ ಸಹಭಾಗಿತ್ವ ಹಾಗೂ ಉತ್ತಮ ರೀತಿಯ ಸಂಪರ್ಕ ಸಾಧಿಸುವ ಉದ್ದೇಶದಿಂದ ಹೊಸ ಸಂಸ್ಥೆಯನ್ನು ಹುಟ್ಟುಹಾಕುವ ಆಲೋಚನೆ ಇದೆ.




