ಪುರಿ: ಪುರಿ ಜಗನ್ನಾಥ ದೇವಾಲಯದ 'ರತ್ನಭಂಡಾರ'ದ ಒಳಗೆ ಯಾವುದೇ ಸುರಂಗವಿಲ್ಲ ಎಂದು ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ಮಂಗಳವಾರ ಹೇಳಿದೆ.
ರಹಸ್ಯ ಸುರಂಗವಿಲ್ಲ ಎಂಬ ವಿಚಾರ 2024 ಸಪ್ಟೆಂಬರ್‌ನಲ್ಲಿ ನಡೆದ ಜಿಪಿಆರ್ ಸರ್ವೆಯಿಂದ ದೃಢಪಟ್ಟಿದೆ. ಸರ್ವೆಯ ಬಳಿಕ ರತ್ನಭಂಡಾರದ ಸಂರಕ್ಷಣಾ ಕಾರ್ಯವನ್ನು ಆರಂಭಿಸಲಾಯಿತು ಎಂದು ಎಎಸ್‌ಐ 'ಎಕ್ಸ್' ಮೂಲಕ ತಿಳಿಸಿದೆ.
'ರತ್ನಭಂಡಾರ'ದ ಪುನರ್‌ನಿರ್ಮಾಣ ಮತ್ತು ದುರಸ್ಥಿ ಕಾರ್ಯವು ಇತ್ತೀಚೆಗಷ್ಟೇ ಪೂರ್ಣಗೊಂಡಿದೆ.




