HEALTH TIPS

ಕಾದ ಹಂಚಿನ ಮೇಲೆ ಒಂದೇ ಒಂದು ತುಂಡು ಇದನ್ನ ಹಾಕಿ, ದೋಸೆ ಅಂಟಿಕೊಳ್ಳದೆ ನೀಟಾಗಿ ಬರುತ್ತೆ

ನಾವೆಲ್ಲಾ ರೆಸ್ಟೋರೆಂಟ್‌ ಅಥವಾ ಹೋಟೆಲ್‌ನಲ್ಲಿ ಗರಿಗರಿಯಾದ ದೋಸೆ ತಿನ್ನುವುದು ಸಾಮಾನ್ಯವಾದ ವಿಷಯ. ಆದರೆ ಅದೇ ದೋಸೆಯನ್ನ ಮನೆಯಲ್ಲಿ ಮಾಡೋದು ಅಂದ್ರೆ ಸವಾಲಿನ ಕೆಲಸ ಅಲ್ಲವೇ, ಇನ್ನೇಲೆ ಆ ಟೆನ್ಷನ್ ಬೇಡ, ಈ ಟೆಕ್ನಿಕ್ ಉಪಯೋಗಿಸಿಕೊಂಡು ದೋಸೆ ಮಾಡೋದು ಹೇಗೆಂದು ಇಲ್ಲಿ ಕೊಡಲಾಗಿದೆ ನೋಡಿ...

ಮನೆಯಲ್ಲಿಯೇ ರೆಸ್ಟೋರೆಂಟ್‌ ಸ್ಟೈಲ್‌ನಲ್ಲಿ ದೋಸೆ ಮಾಡಿಕೊಂಡು ತಿನ್ಬೇಕಾ? ನೀವು ಜಾಸ್ತಿ ಟೆನ್ಷನ್ ತಗೊಳ್ಬೇಡಿ. ಯಾಕಂದ್ರೆ ಅದನ್ನ ಮಾಡೋದು ಬಹಳ ಸುಲಭ. ದೋಸೆ ಮಾಡುವುದು ಕೂಡ ಒಂದು ಕಲೆ. ಕೆಲವರು ಅದನ್ನು ಚೆನ್ನಾಗಿ ಮಾಡ್ತಾರೆ. ಮತ್ತೆ ಕೆಲವರಿಗೆ ಅಥವಾ ಈಗಷ್ಟೇ ಅಡುಗೆ ಕಲಿಯುತ್ತಿರುವವರಿಗೆ ಪ್ಯಾನ್ ಅಥವಾ ಹಂಚಿನ ಮೇಲೆ ಹಾಕ್ತಿದ್ದಂತೆ ಅಂಟಿಕೊಳ್ಳುತ್ತೆ ಅಂತಾರೆ.

ಹಾಗೆ ದೋಸೆ ಪ್ಯಾನ್‌ಗೆ ಅಂಟಿಕೊಳ್ಳುತ್ತಿದ್ದಂತೆ ಕೆಳಗಿನಿಂದ ಬೇಗನೆ ಉರಿಯಲು ಪ್ರಾರಂಭಿಸುತ್ತದೆ. ಇದರಿಂದಾಗಿ ಅದು ಗರಿಗರಿಯಾಗುವುದಿರಲಿ, ರುಚಿಕರವಾಗಿಯೂ ಇರುವುದಿಲ್ಲ. ನೀವು ಸಹ ಇದೇ ರೀತಿ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಶಾಂಭವಿ ಎಂಬ

shambhavi051997 ಎಂಬ ಇನ್ಸ್ಟಾಗ್ರಾಂ ಪೇಜ್‌ನಿಂದ ಪರ್‌ಫೆಕ್ಟ್ ಆಗಿ ದೋಸೆ ಮಾಡುವುದು ಹೇಗೆಂದು ತಿಳಿಸಲಾಗಿದೆ. ನೀವು ಆ ವಿಡಿಯೋ ನೋಡಿ ಸೂಪರ್ ಆಗಿ ದೋಸೆ ಮಾಡ್ಬೋದು.

* ಪ್ಯಾನ್ ಅಥವಾ ಹಂಚು ತುಂಬಾ ಬಿಸಿಯಾಗಿದ್ದರೆ ದೋಸೆ ಹಿಟ್ಟು ತಕ್ಷಣವೇ ಅಂಟಿಕೊಂಡು ಸೀದು ಹೋಗುತ್ತದೆ. ಆದ್ದರಿಂದ ತುಂಬಾ ಬಿಸಿಯಾಗಿರದಂತೆ ನೋಡಿಕೊಳ್ಳಿ. ಉರಿ ಹೆಚ್ಚಿದ್ದಷ್ಟು ದೋಸೆ ಹರಡುವುದಿಲ್ಲ, ಬೇಯದೆ ಹಾಗೆ ಉಳಿಯುತ್ತದೆ.

* ಹೆಚ್ಚು ಎಣ್ಣೆ ಸಹ ದೋಸೆ ಸರಿಯಾಗಿ ಹರಡಲು ಬಿಡುವುದಿಲ್ಲ, ಇನ್ನು ಕಡಿಮೆ ಎಣ್ಣೆ ದೋಸೆ ಅಂಟಿಕೊಳ್ಳುವಂತೆ ಮಾಡುತ್ತದೆ.

* ಹಳೆಯ ನಾನ್‌ಸ್ಟಿಕ್ ಪ್ಯಾನ್‌ಗಳು ತಮ್ಮ ಲೇಪನವನ್ನು ಕಳೆದುಕೊಳ್ಳುವುದರಿಂದ ಇದು ದೋಸೆ ಅಂಟಿಕೊಳ್ಳುವ ಅಪಾಯವನ್ನು ಹೆಚ್ಚಿಸುತ್ತದೆ.

* ಮತ್ತೊಂದು ಕಾರಣವೆಂದರೆ ದೋಸೆ ಹಿಟ್ಟು ತುಂಬಾ ದಪ್ಪ ಇರಬಾರದು ಅಥವಾ ತುಂಬಾ ತೆಳ್ಳಗಿರಬಾರದು. ಒಟ್ಟಾರೆ ಹದವಾದ ಹಿಟ್ಟಿನಿಂದ ಗರಿಗರಿಯಾದ ದೋಸೆ ಮಾಡಬಹುದು.

ಶಾಂಭವಿ ತಮ್ಮ shambhavi051997 ಎಂಬ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ಪ್ಯಾನ್ ಬಿಸಿ ಮಾಡಿದ ನಂತರ ಅದರ ಮೇಲೆ ಐಸ್ ಉಜ್ಜುತ್ತಾರೆ.

ಆ ನಂತರ ಐಸ್ ನೀರನ್ನು ತೆಗೆದು ಬಟ್ಟೆಯಿಂದ ಪ್ಯಾನ್ ಅನ್ನು ಸ್ವಚ್ಛಗೊಳಿಸುತ್ತಾರೆ. ಈಗ ದೋಸೆ ಹಿಟ್ಟು ಹರಡಿದಾಗ ಪರ್‌ಫೆಕ್ಟ್ ದೋಸೆ ಸಿದ್ಧವಾಗುತ್ತದೆ. ಇದು ಹೇಗೆ ಸಾಧ್ಯವೆಂದರೆ ಐಸ್ ತಾಪಮಾನ ಬ್ಯಾಲೆನ್ಸ್ ಮಾಡಲು ಸಹಾಯ ಮಾಡುತ್ತದೆ.


ಹೇಗಂದ್ರೆ ದೋಸೆ ಮಾಡಲು ಪ್ಯಾನ್ ಬಿಸಿ ಮಾಡಿದಾಗ ಕೆಲವೊಮ್ಮೆ ಅದು ಅಗತ್ಯಕ್ಕಿಂತ ಹೆಚ್ಚು ಬಿಸಿಯಾಗುತ್ತದೆ. ಅದೇ ನಾವು ಪ್ಯಾನ್ ಮೇಲೆ ಐಸ್ ತುಂಡನ್ನು ಉಜ್ಜುವುದರಿಂದ ಅದರ ಮೇಲ್ಮೈ ತಾಪಮಾನ ಇದ್ದಕ್ಕಿದ್ದಂತೆ ಕಡಿಮೆಯಾಗುತ್ತದೆ. ಈ ತಾಪಮಾನವು ದೋಸೆ ಪರ್‌ಫೆಕ್ಟ್ ಆಗಿ ಬರಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ತಾಪಮಾನದಲ್ಲಿನ ಹಠಾತ್ ಬದಲಾವಣೆಯಿಂದ ದೋಸೆ ಸುಲಭವಾಗಿ ಹೊರಬರುತ್ತದೆ, ಅಂಟಿಕೊಳ್ಳೋದು ಇಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries