ಕಾಸರಗೋಡು: ಜಿಲ್ಲೆಯ ಡಯಾಲಿಸಿಸ್ ಕೇಂದ್ರಗಳು ಮೂತ್ರಪಿಂಡ ರೋಗಿಗಳಿಗೆ ಸಹಾಯ ಮಾಡುತ್ತಿವೆ. ಜಿಲ್ಲೆಯ ವಿವಿಧ ಬ್ಲಾಕ್‍ಗಳು ಮತ್ತು ನಗರಸಭೆಗಳಲ್ಲಿ ಆರು ಡಯಾಲಿಸಿಸ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕಾಞಂಗಾಡ್ ಬ್ಲಾಕ್‍ನ ಪೆರಿಯ ಸಮುದಾಯ ಆರೋಗ್ಯ ಕೇಂದ್ರ, ನೀಲೇಶ್ವರ ನಗರಸಭೆಯ ನೀಲೇಶ್ವರ ತಾಲ್ಲೂಕು ಆಸ್ಪತ್ರೆ, ಪರಪ್ಪ ಬ್ಲಾಕ್‍ನ ಪೂಡನ್‍ಕಲ್ಲ್ ತಾಲ್ಲೂಕು ಆಸ್ಪತ್ರೆ, ಮಂಜೇಶ್ವರ ಬ್ಲಾಕ್‍ನ ಮಂಗಲ್ಪಾಡಿ ತಾಲ್ಲೂಕು ಆಸ್ಪತ್ರೆ, ಕಾಸರಗೋಡು ನಗರಸಭೆಯ ಕಾಸರಗೋಡು ಜಿಲ್ಲಾ ಆಸ್ಪತ್ರೆ ಮತ್ತು ಕಾರಡ್ಕ ಬ್ಲಾಕ್‍ನ ಮುಳಿಯಾರ್ ಕುಟುಂಬ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಡಯಾಲಿಸಿಸ್ ಕೇಂದ್ರಗಳು ಜಿಲ್ಲಾ ಪಂಚಾಯತ್, ಬ್ಲಾಕ್ ಪಂಚಾಯತ್, ನಗರಸಭೆ ಮತ್ತು ಗ್ರಾಮ ಪಂಚಾಯತ್ ನಿಧಿಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತಿವೆ.





