HEALTH TIPS

ಹಾಲಿನ ಮಾರುಕಟ್ಟೆ ತೆರೆದುಬಿಟ್ಟರೆ ಭಾರತೀಯ ರೈತರಿಗೆ ಲಕ್ಷ ಕೋಟಿ ನಷ್ಟ? ಎಸ್​ಬಿಐ ವರದಿಯಲ್ಲಿ ಆತಂಕ

ನವದೆಹಲಿ: ವ್ಯಾಪಾರ ಒಪ್ಪಂದ ಕುದುರಿಸಲು ಭಾರತ ಮತ್ತು ಅಮೆರಿಕ (India US trade deal) ಮಧ್ಯೆ ಮಾತುಕತೆ ನಿರಂತರವಾಗಿ ನಡೆಯುತ್ತಿದೆ. ಭಾರತದ ಡೈರಿ ಮಾರುಕಟ್ಟೆಯನ್ನು (Indian dairy market) ಪ್ರವೇಶಿಸಲು ಅಮೆರಿಕ ತುದಿಗಾಲಿನಲ್ಲಿ ನಿಂತಿದೆ. ಭಾರತೀಯರ ರೈತರ ಜೀವನಾಡಿಯಾದ ಡೈರಿ ಉದ್ಯಮವನ್ನು ಮುಕ್ತಗೊಳಿಸುವುದು ಭಾರತಕ್ಕೆ ಇಷ್ಟವಿಲ್ಲ.

ಹೀಗಾಗಿ, ಒಪ್ಪಂದವು ತಾರ್ಕಿಕ ಅಂತ್ಯ ಮುಟ್ಟಲು ವಿಳಂಬವಾಗುತ್ತಿದೆ. ಒಂದು ವೇಳೆ, ಹೈನು ಮಾರುಕಟ್ಟೆಯನ್ನು ಭಾರತವು ಅಮೆರಿಕಕ್ಕೆ ತೆರೆದಿಟ್ಟರೆ ಏನಾಗುತ್ತದೆ, ಎಷ್ಟು ನಷ್ಟವಾಗುತ್ತದೆ? ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಂಶೋಧನಾ ವರದಿಯೊಂದರ ಪ್ರಕಾರ ಡೈರಿ ಸೆಕ್ಟರ್ ಅನ್ನು ಮುಕ್ತಗೊಳಿಸುವುದರಿಂದ ಭಾರತೀಯ ರೈತರಿಗೆ (Farmers) ಅಂದಾಜು 1.03 ಲಕ್ಷ ಕೋಟಿ ರೂ ನಷ್ಟವಾಗಬಹುದು. ದೇಶದ ಆದಾಯಕ್ಕೆ 1.8 ಲಕ್ಷ ಕೋಟಿ ರೂ ಸಂಚಕಾರ ಬೀಳಬಹುದು.

ಭಾರತದ ಡೈರಿ ಸೆಕ್ಟರ್ ಅನ್ನು ಅಮೆರಿಕಕ್ಕೆ ಮುಕ್ತಗೊಳಿಸಿದರೆ ಹಾಲಿನ ಆಮದು 25 ಮಿಲಿಯನ್ ಟನ್​ಗಳಷ್ಟು ಹೆಚ್ಚಬಹುದು. ಭಾರತದಲ್ಲಿ ಹಾಲಿನ ಬೆಲೆ ಶೇ. 15ರಷ್ಟಾದರೂ ಕಡಿಮೆ ಆಗಬಹುದು ಎಂದು ಈ ಎಸ್​ಬಿಐ ವರದಿ ಅಭಿಪ್ರಾಯಪಟ್ಟಿದೆ.

'ದೇಶದ ಹಾಲಿನ ಬೆಲೆ ಶೇ. 15ರಷ್ಟು ಕಡಿಮೆ ಆಗಿಹೋದರೆ, ಒಟ್ಟು ಆದಾಯಕ್ಕೆ ಆಗುವ ನಷ್ಟ 1.8 ಲಕ್ಷ ಕೋಟಿ ರೂ. ಈ ಆದಾಯದಲ್ಲಿ ರೈತರ ಪಾಲು ಶೇ. 60 ಎಂದಾದಲ್ಲಿ ರೈತರಿಗೆ ಆಗಬಹುದಾದ ನಷ್ಟ 1.03 ಲಕ್ಷ ಕೋಟಿ ರೂ' ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಕನಾಮಿಕ್ ರಿಸರ್ಚ್ ಡಿಪಾರ್ಟ್ಮೆಂಟ್ ಸಿದ್ಧಪಡಿಸಿದ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಹಾಲಿನ ಬೆಲೆ ಶೇ. 15ರಷ್ಟು ಕಡಿಮೆಯಾದರೆ ಹಾಲಿಗೆ ಬೇಡಿಕೆ ಹೆಚ್ಚಬಹುದು. 14 ಮಿಲಿಯನ್ ಟನ್ ಹೆಚ್ಚುವರಿ ಹಾಲಿಗೆ ಬೇಡಿಕೆ ಬರಬಹುದು. ಅದೇ ವೇಳೆ ಹಾಲಿನ ಸರಬರಾಜಿನಲ್ಲಿ 11 ಮಿಲಿಯನ್ ಟನ್ ಹಾಲು ಕಡಿಮೆಗೊಳ್ಳಬಹುದು. ಈ 25 ಮಿಲಿಯನ್ ಟನ್ ಹಾಲಿನ ಅವಶ್ಯಕತೆಯನ್ನು ಆಮದು ಮೂಲಕ ಭರಿಸಬೇಕಾಗುತ್ತದೆ ಎಂದು ಈ ಎಸ್​​ಬಿಐ ವರದಿಯಲ್ಲಿ ಎಚ್ಚರಿಸಲಾಗಿದೆ.

ಅಮೆರಿಕದಲ್ಲಿ ಡೈರಿ ಉದ್ಯಮಕ್ಕೆ ಭಾರೀ ಸಬ್ಸಿಡಿಗಳನ್ನು ನೀಡಲಾಗುತ್ತದೆ. ಹೀಗಾಗಿ, ಕಡಿಮೆ ಬೆಲೆಗೆ ಹಾಲಿನ ಉತ್ಪನ್ನಗಳು ಸರಬರಾಜುತ್ತದೆ. ಇದು ಭಾರತೀಯ ರೈತರಿಗೆ ಮಾರಕವಾಗಬಹುದು. ಅದರಲ್ಲೂ ಕೆಲವೇ ಹಸುಗಳನ್ನು ಸಾಕಿ, ಅದರ ಹಾಲು ನಂಬಿಕೊಂಡೇ ಬದುಕು ನಡೆಸುತ್ತಿರುವ ಸಣ್ಣ ರೈತರಿಗೆ ಹೊಡೆತ ಬೀಳಬಹುದು ಎಂದು ಭಾವಿಸಲಾಗಿದೆ.

ಅಮೆರಿಕದಿಂದ ಕುಲಾಂತರಿ ತಳಿ ಆಹಾರದ ಬರುವ ಅಪಾಯ

ಅಮೆರಿಕದ ಡೈರಿ ಸೆಕ್ಟರ್​ನಲ್ಲಿ ಕುಲಾಂತರಿ ತಳಿ ಹಾಗು ಗ್ರೋತ್ ಹಾರ್ಮೋನುಗಳ ಬಳಕೆ ವ್ಯಾಪಕವಾಗಿದೆ. ಅಲ್ಲಿಂದ ಭಾರತಕ್ಕೆ ಕುಲಾಂತರಿ ಆಹಾರ ಸಾಕಷ್ಟು ಹರಿದುಬರುವ ಅಪಾಯ ಇದೆ ಎಂಬುದು ಇನ್ನೊಂದು ಗಮನಾರ್ಹ ಎಚ್ಚರಿಕೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries