ಕೋಝಿಕೋಡ್: ಎಸ್.ಎಫ್.ಐ ಅಖಿಲ ಭಾರತ ಅಧ್ಯಕ್ಷರಾಗಿ ಆದರ್ಶ್ ಎಂ ಸಜಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಜನ್ ಭಟ್ಟಾಚಾರ್ಯ ಆಯ್ಕೆಯಾಗಿದ್ದಾರೆ.
ಕೋಝಿಕೋಡ್‍ನಲ್ಲಿ ನಡೆದ ಅಖಿಲ ಭಾರತ ಸಮ್ಮೇಳನದಲ್ಲಿ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಮ್ಮೇಳನವು ಕೇಂದ್ರ ಕಾರ್ಯಕಾರಿ ಸಮಿತಿಯ 87 ಸದಸ್ಯರನ್ನು ಸಹ ಆಯ್ಕೆ ಮಾಡಿತು.
ಕೊಲ್ಲಂನ ಚತ್ತನ್ನೂರು ಮೂಲದ ಆದರ್ಶ್ ಎಂ ಸಜಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಅವರು ಎಸ್.ಎಫ್.ಐ. ರಾಜ್ಯ ಉಪಾಧ್ಯಕ್ಷ ಮತ್ತು ಅಖಿಲ ಭಾರತ ಜಂಟಿ ಕಾರ್ಯದರ್ಶಿಯಾಗಿದ್ದರು. ಆದರ್ಶ್ ದೆಹಲಿಯ ಜನ್ಹಿತ್ ಕಾನೂನು ಕಾಲೇಜಿನಲ್ಲಿ ಅಂತಿಮ ವರ್ಷದ ಎಲ್.ಎಲ್.ಬಿ. ವಿದ್ಯಾರ್ಥಿ. ಪಶ್ಚಿಮ ಬಂಗಾಳದ ಜಾದವ್‍ಪುರದ ಶ್ರೀಜನ್ ಭಟ್ಟಾಚಾರ್ಯ ಅವರನ್ನು ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಅವರು ಇತಿಹಾಸದಲ್ಲಿ ಸ್ನಾತಕೋತ್ತರ ಪದವೀಧರರು.
ಸುಭಾಷ್ ಜಾಕರ್, ಟಿ ನಾಗರಾಜು, ರೋಹಿದಾಸ್ ಯಾದವ್, ಸತ್ಯೇಶ್ ಲೇಯುವ, ಶಿಲ್ಪಾ ಸುರೇಂದ್ರನ್, ಪ್ರಣವ್ ಖರ್ಜಿ, ಎಂ ಶಿವಪ್ರಸಾದ್, ಸಿ ಮೃದುಲಾ (ಉಪಾಧ್ಯಕ್ಷರು).
ಅಖಿಲ ಭಾರತ ಸಮಿತಿ ಐಶೆ ಘೋಷ್, ಜಿ ಅರವಿಂದ ಸಾಮಿ, ಅನಿಲ್ ಠಾಕೂರ್, ಕೆ ಪ್ರಸನ್ನಕುಮಾರ್, ದೇಬಂಜನ್ ದೇವ್, ಪಿ ಎಸ್ ಸಂಜೀವ್, ಶ್ರೀಜನ್ ದೇವ್ ಮತ್ತು ಮುಹಮ್ಮದ್ ಅತೀಕ್ ಅಹ್ಮದ್ (ಜಂಟಿ ಕಾರ್ಯದರ್ಶಿಗಳು) ಅವರನ್ನು ಒಳಗೊಂಡಿದೆ.





