HEALTH TIPS

ಮೂರು ಅಪಾಚೆ ಹೆಲಿಕಾಪ್ಟರ್‌ ಪೂರೈಸಿದ ಬೋಯಿಂಗ್; ಭಾರತೀಯ ಭೂಸೇನೆಗೀಗ ಭೀಮಬಲ

ನವದೆಹಲಿ: ಭಾರತೀಯ ಸೇನೆಗೆ ಮೂರು ಅಪಾಚೆ ಯುದ್ಧ ಹೆಲಿಕಾಪ್ಟರ್‌ಗಳನ್ನು ಅಮೆರಿಕದ ವಿಮಾನ ತಯಾರಿಕಾ ಕಂಪನಿ ಬೋಯಿಂಗ್‌ ರವಾನಿಸಿದೆ.

ಭಾರತಕ್ಕೆ ಆರು ಹೆಲಿಕಾಪ್ಟರ್‌ಗಳನ್ನು ‍ಪೂರೈಸುವ ಒಪ್ಪಂದದ ಭಾಗವಾಗಿ ಮೊದಲ ಹಂತದಲ್ಲಿ ಮೂರು AH-64E ಅಪಾಚೆ ಹೆಲಿಕಾಪ್ಟರ್‌ಗಳನ್ನು ರವಾನಿಸಿದೆ.

ಈ ಹೆಲಿಕಾಪ್ಟರ್‌ ವಿಶ್ವದ ಅತ್ಯಂತ ಸುಧಾರಿತ ಮಲ್ಟಿ ರೋಲ್‌ ಯುದ್ಧ ಹೆಲಿಕಾಪ್ಟರ್‌ ಆಗಿದ್ದು, ಇವುಗಳನ್ನು ಅಮೆರಿಕ ಸೇನೆ ಬಳಸುತ್ತದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸೇನೆ. 'ಈ ಅತ್ಯಾಧುನಿಕ ಹೆಲಿಕಾಪ್ಟರ್‌ಗಳು ಭಾರತೀಯ ಸೇನೆಯ ಕಾರ್ಯಾಚರಣೆಯ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸುತ್ತವೆ' ಎಂದು ಬರೆದುಕೊಂಡಿದೆ.

2020ರಲ್ಲಿ 22 E- ಮಾದರಿಯ ಅಪಾಚೆ ಹೆಲಿಕಾಪ್ಟರ್ ಅನ್ನು ಭಾರತೀಯ ಸೇನೆಗೆ ಅಮೆರಿಕ ಪೂರೈಸಿತ್ತು, ಇದೇ ವೇಳೆ AH-64Eನ ಆರು ವಿಮಾನಗಳನ್ನು ಪೂರೈಸುವ ಒಪ್ಪಂದಕ್ಕೆ ಸಹಿ ಹಾಕಿತ್ತು. 2015ರ ಸೆಪ್ಟೆಂಬರ್‌ನಲ್ಲಿ ಭಾರತೀಯ ವಾಯುಸೇನೆ (ಐಎಎಫ್‌), 22 ಅಪಾಚೆ ಹೆಲಿಕಾಪ್ಟರ್‌ಗಾಗಿ ಅಮೆರಿಕ ಸರ್ಕಾರ ಮತ್ತು ಬೋಯಿಂಗ್‌ ಲಿಮಿಟೆಡ್‌ನೊಂದಿಗೆ ಶತಕೋಟಿ ಡಾಲರ್‌ ಒಪ್ಪಂದ ಮಾಡಿಕೊಂಡಿತ್ತು.

ಹೆಚ್ಚುವರಿ 2017ರಲ್ಲಿ ರಕ್ಷಣಾ ಇಲಾಖೆಯು ಭೂಸೇನೆಗಾಗಿ₹4,168 ಕೋಟಿ ವೆಚ್ಚದಲ್ಲಿ ಬೋಯಿಂಗ್‌ನಿಂದ ಶಸ್ತ್ರಾಸ್ತ್ರ ವ್ಯವಸ್ಥೆಗಳೊಂದಿಗೆ ಆರು ಅಪಾಚೆ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಅನುಮೋದನೆ ನೀಡಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries