ಕೊಚ್ಚಿ: ನಟ ಮತ್ತು ಬಿಜೆಪಿ ನಾಯಕ ಕೃಷ್ಣಕುಮಾರ್ ಅವರ ಪುತ್ರಿ ದಿಯಾ ಅವರ ಸಂಸ್ಥೆಯಿಂದ 69 ಲಕ್ಷ ರೂ. ವಂಚನೆ ಪ್ರಕರಣದಲ್ಲಿ ಮಾಜಿ ಉದ್ಯೋಗಿಗಳ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಆರೋಪಿಗಳಾಗಿರುವ ಸಂಸ್ಥೆಯ ಮಾಜಿ ಉದ್ಯೋಗಿಗಳಾದ ವಿನೀತಾ ಮತ್ತು ರಾಧು ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ತಿರಸ್ಕರಿಸಿದ್ದಾರೆ.
ಅಪರಾಧ ಶಾಖೆಯು ಆರ್ಥಿಕ ವಂಚನೆಗಾಗಿ ದಾಖಲಿಸಿರುವ ಪ್ರಕರಣದಲ್ಲಿ ಪ್ರಕರಣದಲ್ಲಿ ಆರೋಪಿಗಳಾಗಿರುವ ವಿನೀತಾ, ರಾಧು ಮತ್ತು ದಿವ್ಯಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರುವನಂತಪುರಂ ಸೆಷನ್ಸ್ ನ್ಯಾಯಾಲಯವು ಈ ಹಿಂದೆ ತಿರಸ್ಕರಿಸಿತ್ತು. ಇದರ ನಂತರ, ವಿನೀತಾ ಮತ್ತು ರಾಧು ಹೈಕೋರ್ಟ್ ಅನ್ನು ಸಂಪರ್ಕಿಸಿದ್ದರು.
ದಿಯಾ ಅವರ ಸಂಸ್ಥೆಯು ತಿರುವನಂತಪುರದ ಕವಡಿಯಾರ್‍ನಲ್ಲಿದೆ. ಇಲ್ಲಿಂದ ಆಭರಣಗಳನ್ನು ಖರೀದಿಸುವ ಜನರಿಂದ ಅವರು ಕ್ಯು.ಆರ್. ಕೋಡ್‍ಗಳನ್ನು ಬದಲಾಯಿಸುವ ಮೂಲಕ ದೊಡ್ಡ ಮೊತ್ತದ ಹಣವನ್ನು ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೃಷ್ಣಕುಮಾರ್ ಮತ್ತು ಅವರ ಮಗಳು ಮ್ಯೂಸಿಯಂ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.


