ತಿರುವನಂತಪುರಂ: ದೇವಸ್ವಂ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ತಪ್ಪು ಪ್ರಶ್ನೆಗಳು ಕೇಳಲ್ಪಟ್ಟು ಅವಾಂತರವಾಗಿರುವುದು ವರದಿಯಾಗಿದೆ. ತಿರುವಾಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷರು ಯಾರು ಎಂಬ ಪ್ರಶ್ನೆಗೆ ಉತ್ತರ ಕೀಲಿಯಲ್ಲಿ(ಆಪ್ಷನ್ಸ್) ಪ್ರಸ್ತುತ ಅಧ್ಯಕ್ಷರ ಹೆಸರು ಇಲ್ಲ.
ಗುರುವಾಯೂರು ದೇವಸ್ವಂ ಮಂಡಳಿಯ ಎಲ್‍ಡಿ ಕ್ಲರ್ಕ್ ಪರೀಕ್ಷೆ ಭಾನುವಾರ ನಡೆದಿತ್ತು. ಪರೀಕ್ಷೆಯಲ್ಲಿ 83 ನೇ ಪ್ರಶ್ನೆ ಅಭ್ಯರ್ಥಿಗಳನ್ನು ಗೊಂದಲಕ್ಕೀಡು ಮಾಡಿತು.
ನೀಡಲಾದ ನಾಲ್ಕು ಹೆಸರುಗಳಲ್ಲಿ, ಪ್ರಸ್ತುತ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಅವರ ಹೆಸರು ಇದ್ದಿರಲಿಲ್ಲ. ಈ ಕಾರಣದಿಂದಾಗಿ, ಅಭ್ಯರ್ಥಿಗಳು ಗೊಂದಲಕ್ಕೊಳಗಾಗಿದ್ದರು ಮತ್ತು ಉತ್ತರ ಬರೆಯಲು ಸಾಧ್ಯವಾಗಲಿಲ್ಲ.






