ಬದಿಯಡ್ಕ: ನಾಪತ್ತೆಯಾಗಿದ್ದ ಅಗಲ್ಪಾಡಿ ಪದ್ಮಾರ್ ನಿವಾಸಿ, ಕೃಷಿಕ ಬಾಲಕೃಷ್ಣ ಭಟ್(73)ಅವರ ಮೃತದೇಹ ಮನೆ ಸನಿಹದ ತೋಟದ ಕೆರೆಯಲ್ಲಿ ಪತ್ತೆಯಾಗಿದೆ. ಭಾನುವಾರ ಸಂಜೆಯಿಂದ ನಾಪತ್ತೆಯಾಗಿದ್ದ ಬಗ್ಗೆ ಪತ್ನಿ ನೀಡಿದ ದೂರಿನನ್ವಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಇವರನ್ನು ಹುಡುಕಾಡುವ ಮಧ್ಯೆ ಕೆರೆಯಲ್ಲಿ ಮೃತದೇಹ ಕಂಡುಬಂದಿದೆ. ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಮಡಿದ್ದಾರೆ.

