ಚಂದ್ರಗಿರಿ ನಡಕ್ಕಾಲ್ ನ ಮಿತೇಶ್ ಎಂಬವರ ಮನೆ ಸಮೀಪದ ಗುಡ್ಡ ನಿನ್ನೆ ರಾತ್ರಿಯ ಭೀಕರ ಮಳೆಗೆ ಕುಸಿದಿದ್ದು ಬೃಹತ್ ಕಲ್ಲು ಸಹಿತ ಮಣ್ಣು ಮನೆಯ ಒಂದು ಪಾರ್ಶ್ವದ ಮೇಲೆ ಕುಸಿದು ಅವಘಡಕ್ಕೆ ಕಾರಣವಾಯಿತು. ಅವಘಡದಿಂದ ಮನೆಯ ಒಂದು ಕೊಠಡಿ ಸಂಪೂರ್ಣ ಹಾನಿಗೊಳಗಾಗಿದ್ದು, ಮನೆ ಭಾಗಶಃ ಹಾನಿಗೊಂಡಿದೆ.
ಮನೆಯ ಸಮೀಪದ ಗುಡ್ಡ ಕುಸಿಯುವ ಬಗ್ಗೆ ಈ ಹಿಂದೆಯೇ ಸಂಶಯಗಳಿದ್ದು, ಎರಡು ವರ್ಷಗಳ ಹಿಂದೆಯೇ ಕಂದಾಯ ಇಲಾಖೆಯ ಅಧಿಕೃತರಿಗೆ ಮನವಿ ನೀಡಿ ವಿಷಯದ ಗಂಭೀರತೆಯನ್ನು ತಿಳಿಸಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲವೆಂದು ಮಿತೇಶ್ ಅವಲತ್ತುಕೊಂಡಿದ್ದಾರೆ.
(ಚಿತ್ರ: ಶ್ರೀಕಾಂತ್ ಕಾಸರಗೋಡು)





