ಕುಂಬಳೆ: ಕಯ್ಯಾರು ಡೋನ್ ಬೋಸ್ಕೋ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕ ಮಹಾಸಭೆ ಶಾಲಾ ಸಭಾಂಗಣದಲ್ಲಿ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯ ಪೀಟರ್ ರೋಡ್ರಿಗಸ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪ್ರವೀಣ್ ಪ್ರಕಾಶ್, ಮಾತೆಯರ ಸಂಘದ ಅಧ್ಯಕ್ಷ ಸಂಶೀನಾ ಮೊದಲಾದವರು ಉಪಸ್ಥಿತರಿದ್ದರು.
ಪೀಟರ್ ರೋಡ್ರಿಗಸ್ ಶಾಲಾ ಕಾರ್ಯ ಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು. ರಕ್ಷಕ ಶಿಕ್ಷಕ ಸಂಘದ ನೂತನ ಕಾರ್ಯಕಾರಿ ಸಮಿತಿಯನ್ನು ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು. ಅಧ್ಯಕ್ಷೆಯಾಗಿ ರಶ್ಮಿ ಸಂತೋಷ್, ಉಪಾಧ್ಯಕ್ಷರಾಗಿ ವೇಣು ಗೋಪಾಲ್ ಹಾಗೂ ಮಾತೆಯರ ಸಂಘದ ಅಧ್ಯಕ್ಷೆಯಾಗಿ ಭವ್ಯ ಆಯ್ಕೆಯಾದರು. ಶಿಕ್ಷಕಿ ಸಿಸ್ಟರ್ ಆಶಾ ಸ್ವಾಗತಿಸಿ, ಜಯ ಚಂದ್ರಿಕಾ ವಂದಿಸಿದರು. ಶಾಂತಿ ಕಾರ್ಯಕ್ರಮ ನಿರೂಪಿಸಿದರು.

.jpg)
