ಮಂಜೇಶ್ವರ: ತೊಟ್ಟೆತ್ತೋಡಿ ವಾಣೀ ವಿಲಾಸ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ ಮತ್ತು ವಾಚನಾ ಸಪ್ತಾಹ ಸಮಾರೋಪ ಗುರುವಾರ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ರಾಜೇಶ್ವರಿ ಟೀಚರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಲೆಕ್ಕಪತ್ರ ಮಂಡಿಸಿದರು. ಪಿ. ಟಿ ಎ ಅಧ್ಯಕ್ಷ ಗಣೇಶ ಜಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾತೃ ಮಂಡಳಿ ಅಧ್ಯಕ್ಷೆ ಹೇಮಾವತಿ, ಪ್ರೀ ಪ್ರೈಮರಿ ಪಿ. ಟಿ. ಎ ಅಧ್ಯಕ್ಷ ಜಯಪ್ರಕಾಶ್ ಕುಳೂರು, ಪ್ರೀ ಫ್ರೈಮರಿ ಎಂ ಪಿ ಟಿ ಎ ಅಧ್ಯಕ್ಷೆ ಸುಮಿತ್ರ, ಶಾಲಾ ಪ್ರಬಂಧಕರ ಪುತ್ರಿ ಪ್ರೇಮ ಶರಧಿ ಉಪಸ್ಥಿತರಿದ್ದರು.
ಪ್ರಸಕ್ತ ಶೈಕ್ಷಣಿಕ ವರ್ಷದ ಕಾರ್ಯಚಟುವಟಿಕೆಗಳು, ಯೋಜನೆಗಳ ಬಗ್ಗೆ ಹೆತ್ತವರೊಂದಿಗೆ ಚರ್ಚಿಸಿ ನೂತನ ಸಮಿತಿ ರೂಪೀಕರಿಸಲಾಯಿತು. ಇದೇ ಸಂದರ್ಭದಲ್ಲಿ ಶಿಕ್ಷಕಿ ಸುಶ್ಮಿತಾ ಅವರು ಮಕ್ಕಳ ಪಠ್ಯ ಚಟುವಟಿಕೆಗಳ ವೀಡಿಯೋ ಪ್ರದರ್ಶಿಸಿದರು. ಈ ಸಂದರ್ಭ ವಾಚನಾ ಸಪ್ತಾಹದ ಸಮಾರೋಪ ಜರಗಿತು. ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಲೇಖಕಿ ಪ್ರಮೀಳಾ ಚುಳ್ಳಿಕ್ಕಾನ ಅವರು ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಮೂಡಿಸುವ ಅನಿವಾರ್ಯತೆಯ ಬಗ್ಗೆ ಮಾತನಾಡಿದರು. ವಾಚನಾ ವಾರದ ಅಂಗವಾಗಿ ನಡೆಸಿದ ಸ್ಪರ್ಧೆಗಳಿಗೆ ಶಾಲಾ ಪ್ರಬಂಧಕ ಡಾ.ಜಯಪ್ರಕಾಶ್ ನಾರಾಯಣ ಅವರ ವತಿಯಿಂದ ಬಹುಮಾನ ವಿತರಿಸಲಾಯಿತು. ಶಿಕ್ಷಕಿ ದೀಕ್ಷಾ ವಂದಿಸಿದರು. ಶಿಕ್ಷಕಿ ಜಯಲಕ್ಷ್ಮಿ ನಿರೂಪಿಸಿದರು.




.jpg)
