ಕಾಸರಗೋಡು: ಚಿಕನ್‍ಪೋಕ್ಸ್ ಬಾಧಿಸಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದ ಪಾಣತ್ತೂರು ನಿವಾಸಿ ಗೌತಮ್ ಎಂಬವರ ಪುತ್ರಿ ಶಿವಾನಿ ವರ್ಮ(10)ಮೃತಪಟ್ಟಿದ್ದಾಳೆ. ಕರುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಗೆ ಚಿಕಿತ್ಸೆ ಮುಂದುವರಿಯುತ್ತಿದ್ದ ಮಧ್ಯೆ ಚಿಕನ್‍ಪೋಕ್ಸ್ ಕಾಣಿಸಿಕೊಂಡಿತ್ತು. ಶನಿವಾರ ಬಾಲಕಿಯನ್ನು ಕಾಞಂಗಾಡಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ ಪರಿಯಾರಂನಲ್ಲಿ ಸುಕ್ತ ಚಿಕಿತ್ಸೆ ಲಭಿಸಿಲ್ಲ. ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿಗೆ ಚಿಕಿತ್ಸೆ ನೀಡುವಲ್ಲಿ ವೈದ್ಯರು ವಿಳಂಬ ನೀತಿ ಅನುಸರಿಸಿದ್ದಾರೆ ಎಂದೂ ಬಾಲಕಿ ತಂದೆ ದೂರಿದ್ದಾರೆ. ಬಾಲಕಿ ಶನಿವಾರ ತಡರಾತ್ರಿ ಮೃತಪಟ್ಟಿದ್ದಳು. ಕರುಳುಸಂಬಂಧಿ ಕಾಯಿಲೆಯಿಂದ ಗುಣಮುಖವಾಗುತ್ತಿರುವ ಮಧ್ಯೆ ಬಾಲಕಿಗೆ ಚಿಕನ್‍ಪೋಕ್ಸ್ ಕಾಣಿಸಿಕೊಂಡಿತ್ತು.


