ಮುಳ್ಳೇರಿಯ: ಜು.28 ರಂದು ವಿಶ್ವ ಪ್ರಕೃತಿ ಸಂರಕ್ಷಣಾ ದಿನಾಚರಣೆಯ ಅಂಗವಾಗಿ, ವಿಮುಕ್ತಿ ಮಿಷನ್ ಕಾಸರಗೋಡು ವಿಭಾಗವು ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಮತ್ತು ಮಾದಕ ದ್ರವ್ಯ ವಿರೋಧಿ ಪ್ರತಿಜ್ಞೆಯನ್ನು ಆಯೋಜಿಸಿತು. ಪೊವ್ವಲ್ ಎಲ್‍ಬಿಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಸಮಾರಂಭವನ್ನು ಮುಳಿಯಾರ್ ಪಂಚಾಯತಿ ಸದಸ್ಯೆ ಪಿ.ಎ. ನಬೀಸಾ ವಿಚಾರ ಸಂಕಿರಣವನ್ನು ಉದ್ಘಾಟಿಸಿದರು. ಹೆಚ್ಚುತ್ತಿರುವ ಮಾದಕ ದ್ರವ್ಯಗಳ ಬಳಕೆಯಿಂದ ಯುವ ಪೀಳಿಗೆಯನ್ನು ರಕ್ಷಿಸಲು, ಮಾದಕ ದ್ರವ್ಯ ವಿರೋಧಿ ಜಾಗೃತಿ ಚಟುವಟಿಕೆಗಳಲ್ಲಿ ಅವರನ್ನು ಭಾಗವಹಿಸುವಂತೆ ಮಾಡಲು ಮತ್ತು ಪ್ರಕೃತಿ ಸಂರಕ್ಷಣೆಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ಈ ವಿಚಾರ ಸಂಕಿರಣವನ್ನು ಆಯೋಜಿಸಿರುವುದು ಸ್ತುತ್ಯರ್ಹ ಎಂದರು.
ಕಾಲೇಜಿನ ಡೀನ್ ಡಾ. ವಿನೋದ್ ಜಾರ್ಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಅಬಕಾರಿ ಆಯುಕ್ತ ಪಿ.ಪಿ. ಜನಾರ್ದನನ್ ಮಾದಕ ದ್ರವ್ಯ ವಿರೋಧಿ ಸಂದೇಶವನ್ನು ನೀಡಿ ಪ್ರತಿಜ್ಞೆಯನ್ನು ಬೋಧಿಸಿದರು. ಸಹಾಯಕ ಅಬಕಾರಿ ನಿರೀಕ್ಷಕ ಅಬ್ದುಲ್ಲ ಕುಂಞÂ ಮತ್ತು ಕೆ.ಎಸ್.ಇ.ಎಸ್.ಎ. ರಾಜ್ಯ ಸಮಿತಿ ಸದಸ್ಯ ಪಿ. ಸುರೇಶಣ್ ಮಾತನಾಡಿದರು. ಜೆಸಿಐ ತರಬೇತುದಾರ ಯತೀಶ್ ಕಾಸರಗೋಡು ವಿಚಾರ ಸಂಕಿರಣ ಪ್ರಸ್ತುತಿ ನೀಡಿದರು. ವಿಮುಕ್ತಿ ಜಿಲ್ಲಾ ಸಂಯೋಜಕಿ ಕೆ.ಎಂ. ಸ್ನೇಹ ಸ್ವಾಗತಿಸಿ, ಮಾದಕ ದ್ರವ್ಯ ವಿರೋಧಿ ಸೆಲ್ ಸಂಯೋಜಕ ಡಾ. ಪ್ರದೀಪ್ ವಂದಿಸಿದರು. ಜಿಲ್ಲೆಯ ವಿವಿಧ ಕಾಲೇಜುಗಳಿಂದ ಸುಮಾರು 100 ವಿದ್ಯಾರ್ಥಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.




.jpg)
