ಕಣ್ಣೂರು: ರಾಜಕೀಯ ಸಂಘರ್ಷದ ಸಮಯದಲ್ಲಿ ಬಾಂಬ್ ದಾಳಿಯಲ್ಲಿ ಬಲಗಾಲನ್ನು ಕಳೆದುಕೊಂಡ ಕಣ್ಣೂರಿನ ಚೆರುವಾಂಚೇರಿಯ ಮೂಲದ ಡಾ. ಅಸ್ನಾ ವಿವಾಹಿತರಾದರು.
ಅಳಕೋಡ್ ಮೂಲದ ಮತ್ತು ಶಾರ್ಜಾದಲ್ಲಿ ಎಂಜಿನಿಯರ್ ಆಗಿರುವ ನಿಖಿಲ್ ವರ. ರಾಜಕೀಯ ನಾಯಕರು ಸೇರಿದಂತೆ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್, ಸಂಸದರಾದ ಎಂ.ಕೆ. ರಾಘವನ್, ಶಾಫಿ ಪರಂಬಿಲ್, ಸಿಪಿಎಂ ನಾಯಕ ಪಿ. ಜಯರಾಜನ್ ಮತ್ತು ಇತರ ರಾಜಕೀಯ ನಾಯಕರು ಚೆರುವಾಂಚೇರಿಯ ಅವರ ಮನೆಯ ಪರಿಸರದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು.
2000ನೇ ಇಸ್ವಿಯಲ್ಲಿ ಸ್ಥಳೀಯಾಡಳಿತ ಚುನಾವಣೆಯ ಸಮಯದಲ್ಲಿ ನಡೆದ ರಾಜಕೀಯ ಸಂಘರ್ಷದಲ್ಲಿ ಸೆಪ್ಟೆಂಬರ್ 27 ರಂದು ಬಾಂಬ್ ದಾಳಿಯಲ್ಲಿ ಅವರು ಕಾಲು ಕಳಕೊಂಡರು. ಬಾಂಬ್ ದಾಳಿಯಲ್ಲಿ ಅಂದು ಆರು ವರ್ಷದ ಬಾಲಕಿಯಾಗಿದ್ದ ಅಸ್ನಾ ಕಾಲು ಕಳಕೊಂಡರು.
ಕೃತಕ ಕಾಲಿನೊಂದಿಗೆ ಜೀವನ ಹೋರಾಡುತ್ತಾ, ಅಸ್ನಾ 2013 ರಲ್ಲಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಮುಗಿಸಿದರು. ಅವರು ಪ್ರಸ್ತುತ ವಡಕರದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಅಭ್ಯಾಸ ಮಾಡುತ್ತಿದ್ದಾರೆ.





