HEALTH TIPS

ಆಪರೇಷನ್ ಸಿಂಧೂರ; 'ಶಾಂತಿ' ಎನ್ನುವುದು ಕೇವಲ ಭ್ರಮೆ ಅಷ್ಟೇ: ಸಚಿವ ರಾಜನಾಥ ಸಿಂಗ್

ನವದೆಹಲಿ: 'ಶಾಂತಿ' ಎನ್ನುವುದು ಕೇವಲ ಭ್ರಮೆ ಮಾತ್ರವೇ. ಏಕೆಂದರೆ ಭಾರತವು ಶಾಂತಿಯನ್ನು ಪರಿಪಾಲನೆ ಮಾಡಿದರೂ ಅನಿಶ್ಚಿತತೆಯ ಸಮಯದಲ್ಲಿ ಎಲ್ಲದಕ್ಕೂ ಸಿದ್ಧವಾಗಿರಬೇಕು ಎಂದ ರಕ್ಷಣಾ ಸಚಿವ ರಾಜನಾಥ ಸಿಂಗ್, ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಸಶಸ್ತ್ರ ಪಡೆಗಳು ಪ್ರದರ್ಶಿಸಿದ ಶೌರ್ಯವನ್ನು ಶ್ಲಾಘಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ದೇಶಿಯವಾಗಿ ನಿರ್ಮಿಸಲಾದ ಉಪಕರಣಗಳ ಕಾರ್ಯಕ್ಷಮತೆಯಿಂದಾಗಿ ಭಾರತ ನಿರ್ಮಿತ ಮಿಲಿಟರಿ ಉತ್ಪನ್ನಗಳಿಗೆ ಜಾಗತಿಕವಾಗಿ ಬೇಡಿಕೆ ಹೆಚ್ಚಾಗಿದೆ ಎಂದರು.

ಜಗತ್ತು ನಮ್ಮ ರಕ್ಷಣಾ ವಲಯದತ್ತ ನೋಡುತ್ತಿದೆ. ನಾವು ಆಮದು ಮಾಡಿಕೊಳ್ಳುತ್ತಿದ್ದ ಹೆಚ್ಚಿನ ಉಪಕರಣಗಳು ಈಗ ಭಾರತದಲ್ಲಿಯೇ ತಯಾರಾಗುತ್ತಿವೆ. ಬದ್ಧತೆಯಿಂದಾಗಿ ನಮ್ಮ ಸುಧಾರಣೆಗಳು ಯಶಸ್ವಿಯಾಗುತ್ತಿವೆ ಎಂದು ಸಿಂಗ್ ಹೇಳಿದ್ದಾರೆ.

ರಕ್ಷಣಾ ಸಚಿವರು ಡಿಎಡಿಯ ಹೊಸ ಧ್ಯೇಯವಾಕ್ಯ ಎಚ್ಚರ, ಚುರುಕು, ಹೊಂದಿಕೊಳ್ಳುವಿಕೆಯನ್ನು ಶ್ಲಾಘಿಸಿದರು. ಇವು ಕೇವಲ ಪದಗಳಲ್ಲ, ವೇಗವಾಗಿ ಅಭಿವೃದ್ಧಿ ಹೊಂದಿರುವ ರಕ್ಷಣಾ ವ್ಯವಸ್ಥೆಗೆ ಹೊಂದಿಕೊಂಡು ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.

'ಶಾಂತಿ' ಸಮಯ ಎನ್ನುವುದು ಕೇವಲ ಭ್ರಮೆ ಅಷ್ಟೇ. ಶಾಂತಿಯನ್ನು ಪರಿಪಾಲನೆ ಮಾಡಿದರೂ ಕೆಲವು ಸಂದರ್ಭಗಳಲ್ಲಿ ನಾವು ಅನಿಶ್ಚಿತತೆಯ ಸಮಯಕ್ಕೂ ಸಿದ್ಧರಾಗಿರಬೇಕು. ಹಠಾತ್ ಬೆಳವಣಿಗೆಗಳು ಕಾರ್ಯಾಚರಣೆಯಲ್ಲಿ ಸಂಪೂರ್ಣ ಬದಲಾವಣೆಯನ್ನು ತರಬಹುದು ಎಂದು ಸಿಂಗ್ ಹೇಳಿದ್ದಾರೆ.

ರಕ್ಷಣಾ ಕ್ಷೇತ್ರದ ಹೆಚ್ಚುತ್ತಿರುವ ಕಾರ್ಯತಂತ್ರ ಮತ್ತು ಆರ್ಥಿಕತೆಯಿಂದಾಗಿ ರಕ್ಷಣಾ ವೆಚ್ಚವನ್ನು ಕೇವಲ ಖರ್ಚು ಎಂಬ ಗ್ರಹಿಕೆಯಿಂದ ಹೂಡಿಕೆಯತ್ತ ಬದಲಾಯಿಸಬೇಕೆಂದು ಸಿಂಗ್‌ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries