ತಿರುವನಂತಪುರಂ: ಹಳದಿ ಕಾರ್ಡ್ ಹೊಂದಿರುವವರಿಗೆ ಓಣಂ ಓಣಂ ಕಿಟ್ ಲಭಿಸಲಿದೆ. ಹಳದಿ ಪಡಿತರ ಚೀಟಿ ಹೊಂದಿರುವ ಆರು ಲಕ್ಷ ಕುಟುಂಬಗಳಿಗೆ 15 ವಸ್ತುಗಳನ್ನು ಒಳಗೊಂಡಿರುವ ಓಣಂ ಕಿಟ್ ಉಚಿತವಾಗಿ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಕಲ್ಯಾಣ ಸಂಸ್ಥೆಗಳ ನಾಲ್ವರು ಸದಸ್ಯರಿಗೆ ಒಂದು ಕಿಟ್ ಉಚಿತವಾಗಿ ಸಿಗಲಿದೆ. ಕಿಟ್‍ನಲ್ಲಿ ಅರ್ಧ ಲೀಟರ್ ತೆಂಗಿನ ಎಣ್ಣೆ, ಅರ್ಧ ಕಿಲೋ ಸಕ್ಕರೆ, ಕಡಲೆ, ಪಾಯಸದ ಶ್ಯಾವಿಗೆ, ಮಿಲ್ಮಾ ತುಪ್ಪ, ಗೋಡಂಬಿ, ಸಾಂಬಾರ್ ಪುಡಿ, ಮೆಣಸಿನ ಪುಡಿ, ಅರಿಶಿನ ಪುಡಿ, ಕೊತ್ತಂಬರಿ ಪುಡಿ, ಚಹಾ ಪುಡಿ, ಕಡಲೆ, ತಿಗರಿಬೇಳೆ, ಹುಡಿಉಪ್ಪು ಮತ್ತು ಬಟ್ಟೆ ಚೀಲಗಳು ಇರುತ್ತವೆ. ಪಡಿತರ ಚೀಟಿ ಹೊಂದಿರುವವರಿಗೆ ಕಡಿಮೆ ದರದಲ್ಲಿ ಅಕ್ಕಿಯನ್ನು ನೀಡಲಾಗುವುದು.
ನೀಲಿ ಕಾರ್ಡ್ ಹೊಂದಿರುವವರಿಗೆ 10.90 ರೂ.ಗೆ 10 ಕೆಜಿ ಅಕ್ಕಿ ಮತ್ತು ಬಿಳಿ ಕಾರ್ಡ್ ಹೊಂದಿರುವವರಿಗೆ 15 ಕೆಜಿ ಅಕ್ಕಿಯನ್ನು 10.90 ರೂ.ಗೆ ನೀಡಲಾಗುವುದು. 94 ಲಕ್ಷ ಕಾರ್ಡ್ ಹೊಂದಿರುವವರಿಗೆ 25 ರೂ.ಗೆ 10 ಕೆಜಿ ಕೆ-ರೈಸ್ ಲಭಿಸಲಿದೆ. ಈ ಅಕ್ಕಿಯನ್ನು ಪ್ರಸ್ತುತ 29 ರೂ.ಗೆ ನೀಡಲಾಗುತ್ತಿದೆ.


