ನವದೆಹಲಿ: ಹಾಂಕಾಂಗ್‌ನಿಂದ ದೆಹಲಿಗೆ ಬಂದು ಲ್ಯಾಂಡ್ ಆದ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
AI 315 ಸಂಖ್ಯೆಯ ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಧ್ಯಾಹ್ಯ 12.12ಕ್ಕೆ ಲ್ಯಾಂಡ್ ಆಗಿದ್ದು, ಪ್ರಯಾಣಿಕರು ವಿಮಾನದಿಂದ ಇಳಿಯುತ್ತಿದ್ದರು, ಈ ವೇಳೆ ವಿಮಾನದ ಒಂದು ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಆದರೆ ಏರ್‌ಲೈನ್‌ನಲ್ಲಿರುವ ಸ್ವಯಂಚಾಲಿತ ವ್ಯವಸ್ಥೆಯಿಂದಾಗಿ ಆಕ್ಸಿಲರಿ ಪವರ್ ಯುನಿಟ್ (ಎಪಿಯು) ಬಂದ್ ಆಗಿದೆ' ಎಂದು ಏರ್‌ಲೈನ್‌ನ ವಕ್ತಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಮಾನಕ್ಕೆ ಸ್ವಲ್ಪ ಪ್ರಮಾಣದ ಹಾನಿಯಾಗಿದೆ. ಸಿಬ್ಬಂದಿ ಮತ್ತು ಪ್ರಯಾಣಿಕರು ವಿಮಾನದಿಂದ ಕೆಳಕ್ಕೆ ಇಳಿದ ಕಾರಣ ಎಲ್ಲರೂ ಸುರಕ್ಷಿತವಾಗಿದ್ದಾರೆ. ಸದ್ಯ ತನಿಖೆ ನಡೆಸಲಾಗುತ್ತಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

