HEALTH TIPS

ಹೈಯರ್ ಸೆಕೆಂಡರಿ ಪಠ್ಯಕ್ರಮದಲ್ಲಿ ಸಮಗ್ರ ಸುಧಾರಣೆ: ಸಚಿವ ವಿ. ಶಿವನ್ ಕುಟ್ಟಿ

ತಿರುವನಂತಪುರಂ: ಹೈಯರ್ ಸೆಕೆಂಡರಿ ಪಠ್ಯಕ್ರಮದಲ್ಲಿ ಸಮಗ್ರ ಸುಧಾರಣೆಯನ್ನು ಜಾರಿಗೆ ತರಲಾಗುವುದು ಎಂದು ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಹೇಳಿದ್ದಾರೆ.

1 ರಿಂದ 10 ನೇ ತರಗತಿಗಳಿಗೆ ಪಠ್ಯಪುಸ್ತಕ ಸುಧಾರಣೆಯ ಮುಂದುವರಿಕೆ ಮತ್ತು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕೇರಳ ಮಾಡಿರುವ ಬದಲಾವಣೆಗಳನ್ನು ಈ ಸುಧಾರಣೆಯಲ್ಲಿ ಗಂಭೀರವಾಗಿ ಪರಿಗಣಿಸಲಾಗುವುದು.

ಮೊದಲ ಹಂತದಲ್ಲಿ, ಎಸ್‍ಸಿಇಆರ್‍ಟಿಯ 80 ಶೀರ್ಷಿಕೆ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲಾಗುವುದು ಎಂದ ಸಚಿವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುವರು.

ಪ್ರಸ್ತುತ, 2015 ರ ಪರಿಷ್ಕøತ ಪಠ್ಯಪುಸ್ತಕಗಳನ್ನು ಶಾಲೆಗಳಲ್ಲಿ ಬಳಸಲಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ಜಗತ್ತಿನಲ್ಲಿ ಪ್ರಮುಖ ಬದಲಾವಣೆಗಳು ಸಂಭವಿಸಿವೆ ಎಂದು ಸಚಿವರು ಗಮನಸೆಳೆದರು.

ಈ ಎಲ್ಲಾ ಬದಲಾವಣೆಗಳು ಮತ್ತು ಭವಿಷ್ಯದ ಸವಾಲುಗಳನ್ನು ಪರಿಗಣಿಸಿ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲಾಗುವುದು. ಈ ಶೈಕ್ಷಣಿಕ ವರ್ಷದಲ್ಲಿ ಪಠ್ಯಕ್ರಮ ಸುಧಾರಣಾ ಕಾರ್ಯ ಪೂರ್ಣಗೊಳ್ಳಲಿದೆ ಮತ್ತು ಮುಂದಿನ ವರ್ಷ ಹೊಸ ಪುಸ್ತಕಗಳು ಮಕ್ಕಳನ್ನು ತಲುಪಲಿವೆ ಎಂದು ಸಚಿವರು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries