HEALTH TIPS

ಶಶಿ ತರೂರ್ ಗೆ ಪಕ್ಷದಲ್ಲಿ ಉಸಿರುಗಟ್ಟಿದಂತೆ ಆಗುತ್ತಿದ್ದರೆ ಅವರ ದಾರಿ ನೋಡಿಕೊಳ್ಳಲಿ: ಕಾಂಗ್ರೆಸ್ ನಾಯಕ ಮುರಳೀಧರನ್

ತಿರುವನಂತಪುರಂ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸದಸ್ಯ ಕೇರಳದ ತಿರುವನಂತಪುರ ಕ್ಷೇತ್ರದ ಸಂಸದ ಶಶಿ ತರೂರ್ ಅವರ ಇತ್ತೀಚಿನ ಹೇಳಿಕೆಗಳು ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದೆ. ಅವರ ಇತ್ತೀಚಿನ ಕ್ರಮಗಳು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಕೆ.ಮುರಳೀಧರನ್ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ದೇಶದ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರಿದ್ದನ್ನು ಪ್ರಶ್ನಿಸಿ ಮಲಯಾಳಂ ದಿನಪತ್ರಿಕೆಯೊಂದರಲ್ಲಿ ಶಶಿ ತರೂರ್ ಬರೆದ ಲೇಖನ ಪ್ರಕಟವಾದ ನಂತರ ಈ ಹೇಳಿಕೆಗಳು ಕೇಳಿಬಂದಿವೆ.

ಇಂದು ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಕೆ ಮುರಳೀಧರನ್, ಶಶಿ ತರೂರ್ ಅವರು ಕಾಂಗ್ರೆಸ್‌ನೊಳಗೆ ಮುಂದುವರಿಯಬೇಕೆ ಅಥವಾ ಸ್ವತಂತ್ರ ರಾಜಕೀಯ ಮಾರ್ಗವನ್ನು ಅನುಸರಿಸಬೇಕೆ ಎಂದು ಅವರೇ ನಿರ್ಧರಿಸಲಿ ಎಂದರು. ಅವರ ಮುಂದೆ ಎರಡು ಮಾರ್ಗಗಳಿವೆ, ಪ್ರಸ್ತುತ ವ್ಯವಸ್ಥೆಯಲ್ಲಿ ಅವರು ನಿರ್ಬಂಧಿತರಾಗಿದ್ದರೆ, ಉಸಿರುಗಟ್ಟುವಂತೆ ಅನಿಸುತ್ತಿದ್ದರೆ ತಮಗೆ ವಹಿಸಲಾಗಿರುವ ಹುದ್ದೆಗಳಿಂದ ಕೆಳಗಿಳಿದು ತಮ್ಮ ಆಯ್ಕೆಯ ರಾಜಕೀಯ ಮಾರ್ಗದಲ್ಲಿ ಮುಂದುವರಿಯಬಹುದು ಎಂದಿದ್ದಾರೆ.

ಶಶಿ ತರೂರ್ ಪ್ರಸ್ತುತ ಎರಡು ಪಾತ್ರಗಳನ್ನು ಕಾಂಗ್ರೆಸ್ ನಲ್ಲಿ ವಹಿಸಿದ್ದಾರೆ, ಹಾಲಿ ಸಂಸತ್ ಸದಸ್ಯರಾಗಿ ಮತ್ತು ಪಕ್ಷದಿಂದ ನೇಮಿಸಲ್ಪಟ್ಟ ಪ್ರಮುಖ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ. ತಮ್ಮ ಸಂಸದೀಯ ಮತ್ತು ಸಾಂಸ್ಥಿಕ ಕರ್ತವ್ಯಗಳನ್ನು ಸಮತೋಲನವಾಗಿಟ್ಟುಕೊಳ್ಳುವುದು ಮತ್ತು ಪಕ್ಷದ ಆಂತರಿಕ ಕಾರ್ಯವಿಧಾನದೊಳಗೆ ವಿಭಿನ್ನ ಅಭಿಪ್ರಾಯಗಳನ್ನು ತೋರಿಸುವುದು.

ಅವರು ಪಕ್ಷದ ಚೌಕಟ್ಟಿನೊಳಗೆ ತಮ್ಮ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದರೆ, ಅದಕ್ಕೆ ಅವಕಾಶವಿದೆ. ಆದರೆ ಬಹಿರಂಗವಾಗಿ ಪಕ್ಷಕ್ಕೆ ಹಾನಿಯುಂಟುಮಾಡುವ ರೀತಿಯಲ್ಲಿ ತಮ್ಮ ಅಸಮಾಧಾನ, ಭಿನ್ನಾಭಿಪ್ರಾಯ ಹೊರಹಾಕುವುದು ಸರಿಯಲ್ಲ. ಅವರಿಗೆ ಕಾಂಗ್ರೆಸ್ ಪಕ್ಷದೊಳಗೆ ಉಸಿರುಗಟ್ಟಿದಂತಾದರೆ, ಗೊಂದಲಮಯ ಹೇಳಿಕೆಗಳನ್ನು ನೀಡುವ ಮುಂದಿನ ಹಾದಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದರು.

ಕಾಂಗ್ರೆಸ್ ವಿಚಾರದಲ್ಲಿ ನೀಡುವ ಹೇಳಿಕೆಗಳು ಪಕ್ಷಕ್ಕೆ ಮಾತ್ರವಲ್ಲದೆ ಸ್ವತಃ ಶಶಿ ತರೂರ್ ಅವರಿಗೇ ಹಾನಿಯನ್ನುಂಟುಮಾಡುತ್ತದೆ. ಒಬ್ಬ ಸಹೋದ್ಯೋಗಿಯಾಗಿ, ಈಗ ಅವರ ಮುಂದಿರುವ ಎರಡು ಮಾರ್ಗಗಳಲ್ಲಿ ಒಂದನ್ನು ಆಯ್ಕೆ ಮಾಡಲಿ ಎಂದು ನಾನು ಒತ್ತಾಯಿಸುತ್ತೇನೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರ ಪಕ್ಷಗಳ ನಾಯಕರನ್ನು ಶಶಿ ತರೂರ್ ಆಗಾಗ್ಗೆ ಹೊಗಳುವ ಬಗ್ಗೆ ಕೇಳಿದ ಪ್ರಶ್ನೆಗೆ ಮುರಳೀಧರನ್, ಅವರು ಕಾಂಗ್ರೆಸ್ ನಾಯಕರನ್ನು ಹೊರತುಪಡಿಸಿ ಎಲ್ಲರನ್ನೂ ಹೊಗಳುತ್ತಾರೆ ಎಂದು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries