HEALTH TIPS

ಜಿಯೋ ಫೈನಾನ್ಷಿಯಲ್- ಅಲಯಂಜ್ ಜಂಟಿಯಾಗಿ ಭಾರತದಲ್ಲಿ ಮರುವಿಮಾ ಕ್ಷೇತ್ರ ಪ್ರವೇಶ

ಮುಂಬೈ : ಅಲಯಂಜ್ ಸಮೂಹ (Allianz)ದ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಅಲಯಂಜ್ ಯುರೋಪ್ ಬಿ.ವಿ., ಹಾಗೂ ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ (ಜೆಎಫ್‌ಎಸ್‌ಎಲ್) ಭಾರತೀಯ ವಿಮಾ ಮಾರುಕಟ್ಟೆಯನ್ನು ಪ್ರವೇಶಿಸಲು 50:50 ದೇಶೀಯ ಮರುವಿಮಾ ಜಂಟಿ ಉದ್ಯಮವನ್ನು ರಚನೆ ಮಾಡುವುದಾಗಿ ಘೋಷಿಸಿವೆ.

ಇದಕ್ಕಾಗಿ ಎರಡೂ ಕಂಪನಿಗಳು ಬದ್ಧತೆಯ ಒಪ್ಪಂದವನ್ನು ಮಾಡಿಕೊಂಡಿವೆ. ಜೆಎಫ್‌ಎಸ್‌ಎಲ್ ತುಂಬ ಗಟ್ಟಿಯಾಗಿ ಸ್ಥಳೀಯ ತಿಳಿವಳಿಕೆ ಮತ್ತು ಬಲವಾದ ಡಿಜಿಟಲ್ ಉಪಸ್ಥಿತಿಯನ್ನು ಹೊಂದಿದ್ದರೆ, ಅಲಯಂಜ್ ಬಲವಾದ ಅಂಡರ್‌ರೈಟಿಂಗ್ ಹಾಗೂ ಜಾಗತಿಕ ಮರುವಿಮಾ ಸಾಮರ್ಥ್ಯಗಳನ್ನು ತರುತ್ತದೆ. ಈ ಜಂಟಿ ಉದ್ಯಮವು ಭಾರತದಲ್ಲಿ ಅಲಯಂಜ್ ನ ಅಸ್ತಿತ್ವದಲ್ಲಿರುವ ಅಲಯಂಜ್- ಮರು ವಿಮೆ ಮತ್ತು ಅಲಯಂಜ್ ವಾಣಿಜ್ಯ ಪೋರ್ಟ್‌ಫೋಲಿಯೊಗಳನ್ನು ಸಹ ಬಳಸಿಕೊಳ್ಳುತ್ತದೆ.

ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕೇತರ ನಿರ್ದೇಶಕಿ ಆದ ಇಶಾ ಅಂಬಾನಿ ಅವರು ಮಾತನಾಡಿ, "ಭಾರತವು ಹೆಚ್ಚುತ್ತಿರುವ ಸಮೃದ್ಧತೆ, ಬೆಳೆಯುತ್ತಿರುವ ಆರ್ಥಿಕ ಅರಿವು ಹಾಗೂ ವ್ಯಾಪಕ ಆಗುತ್ತಿರುವ ಡಿಜಿಟಲ್ ಪರಿಸರದಿಂದ ವಿಮಾ ಬೇಡಿಕೆಯಲ್ಲಿ ಏರಿಕೆಯನ್ನು ಕಾಣುತ್ತಿದೆ. ಈ ಪಾಲುದಾರಿಕೆಯು ಅಲಯಂಜ್ ನ ಜಾಗತಿಕ ಮರುವಿಮಾ ಪರಿಣತಿ ಜೊತೆಗೆ ಜೆಎಫ್‌ಎಸ್‌ಎಲ್‌ನ ಭಾರತೀಯ ಮಾರುಕಟ್ಟೆಯ ಆಳವಾದ ತಿಳಿವಳಿಕೆ ಸೇರುತ್ತದೆ. ಇದರಿಂದಾಗಿ ವಿಮಾದಾರರಿಗೆ ನವೀನ ಮತ್ತು ಕಸ್ಟಮೈಸ್ ಮಾಡಿದ ಮರುವಿಮಾ ಪರಿಹಾರಗಳನ್ನು ಒದಗಿಸುವ ಗುರಿಯನ್ನು ಹೊಂದಿರುವ ದೃಢವಾದ ಡಿಜಿಟಲ್ ಮೂಲಸೌಕರ್ಯ ಸಂಯೋಜಿಸುತ್ತದೆ. '2047ನೇ ಇಸವಿ ವೇಳೆಗೆ ಎಲ್ಲರಿಗೂ ವಿಮೆ' ಎಂಬ ರಾಷ್ಟ್ರೀಯ ಗುರಿಗೆ ಅನುಗುಣವಾಗಿ, ಪ್ರತಿ ಭಾರತೀಯರಿಗೂ ರಕ್ಷಣೆಯನ್ನು ಖಚಿತಪಡಿಸುವ ಬಲವಾದ ಮತ್ತು ಹೆಚ್ಚು ಅಂತರ್ಗತ ವಿಮಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ," ಎಂದರು.

ಅಲಯಂಜ್ ಎಸ್‌ಇಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಲಿವರ್ ಬೆಟ್ ಮಾತನಾಡಿ, "ಭಾರತದಲ್ಲಿ ಜಿಯೋ ಫೈನಾನ್ಷಿಯಲ್ ಸರ್ವೀಸಸ್‌ನೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು ನಾವು ಹೆಮ್ಮೆ ಪಡುತ್ತೇವೆ ಮತ್ತು ತಮ್ಮ ಕುಟುಂಬಗಳು ಮತ್ತು ಅವರ ವ್ಯವಹಾರಗಳಿಗೆ ಸರಿಯಾದ ರಕ್ಷಣೆಯನ್ನು ಬಯಸುವ ಗ್ರಾಹಕರಿಗೆ ಸೇವೆ ಸಲ್ಲಿಸುವ ಅವಕಾಶವನ್ನು ಹೊಂದಿದ್ದೇವೆ. ಅಲಯಂಜ್ ಮತ್ತು ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಗ್ರಾಹಕ ಶ್ರೇಷ್ಠತೆಗೆ ಖ್ಯಾತಿಯನ್ನು ಹೊಂದಿರುವ ಎರಡು ವಿಶ್ವಾಸಾರ್ಹ ಬ್ರ್ಯಾಂಡ್‌ಗಳಾಗಿವೆ ಮತ್ತು ಈ ರೋಮಾಂಚಕಾರಿ ಪ್ರಯಾಣದಲ್ಲಿ ಸಕ್ರಿಯವಾಗಿ ಕೊಡುಗೆ ನೀಡಲು ಮತ್ತು ಭಾಗವಹಿಸಲು ನಾವು ಎದುರು ನೋಡುತ್ತಿದ್ದೇವೆ," ಎಂದಿದ್ದಾರೆ.

ಅಲಯಂಜ್ -ಮರು ವಿಮೆ ಭಾರತದಲ್ಲಿ 25 ವರ್ಷಗಳಿಗೂ ಹೆಚ್ಚು ಕಾಲ ಮರುವಿಮೆ ಮಾಡುತ್ತಾ ಬಂದಿದೆ. ನಿಯಮಬದ್ಧ ಮತ್ತು ನಿಯಂತ್ರಕ ಅನುಮೋದನೆಗಳನ್ನು ಪಡೆದ ನಂತರ ಜಂಟಿ ಉದ್ಯಮವು ಕಾರ್ಯಾಚರಣೆ ಪ್ರಾರಂಭಿಸುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries