ಶ್ರೀನಗರ: ಭಾರತ ಮುಂದುವರಿಯಬೇಕಾದರೆ ಮತ್ತು ಸಮೃದ್ಧ ರಾಷ್ಟ್ರವಾಗಬೇಕಾದರೆ, ಪಾಕಿಸ್ತಾನದ ಜೊತೆಗೆ ಸಂವಾದ ಮತ್ತು ಸಮನ್ವಯದ ಹಾದಿಯನ್ನು ಹಿಡಿಯಬೇಕು ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಸೋಮವಾರ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇಲ್ಲಿ ಪಕ್ಷದ 26ನೇ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಜಮ್ಮು ಕಾಶ್ಮೀರದ ಜನರು ನಿಮ್ಮ ಶತ್ರುಗಳಲ್ಲ ಎಂದು ಹೇಳಲು ಬಯಸುತ್ತೇನೆ. ಅವರನ್ನು 'ನಿಮ್ಮ ಹೃದಯದಿಂದ' ನೋಡಿ ಮತ್ತು ಆಲಿಸಿ. ಹಾಗೆ ಮಾಡದ ಹೊರತು ಭಾರತ-ಪಾಕಿಸ್ತಾನದ ಸಮಸ್ಯೆ ಬಗೆಹರಿಯುವುದಿಲ್ಲ' ಎಂದು ಅವರು ಹೇಳಿದ್ದಾರೆ.




