ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಕುಂಬಳೆಯಲ್ಲಿ ನಿಯಂತ್ರಣ ತಪ್ಪಿದ ಕಾರು ರಸ್ತೆ ಅಂಚಿನ ತಡೆಗೋಡೆಗೆ ಡಿಕ್ಕಿಯಾಗಿ ಮಹಿಳೆ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಕಣ್ಣೂರು ಇರಿಕ್ಕೂರ್ ನಿವಾಸಿಗಳಾದ ಅಬ್ದುಲ್ ನಾಸರ್, ನುಸ್ರತ್, ಅಯ್ಯೂಬ್, ಜಾಫರ್ ಗಾಯಾಳುಗಳು. ಇವರಲ್ಲಿ ಗಂಭೀರ ಗಾಐಗೊಂಡ ಅಬ್ದುಲ್ ನಾಸರ್ ಅವರನ್ನು ಮಂಗಳೂರು ಮತ್ತು ಇತರರನ್ನು ಕುಂಬಳೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕಾರಿನಲ್ಲಿ ಕುಟುಂಬದವರು ಮಣಿಪಾಲದ ಆಸ್ಪತ್ರೆಗೆ ತೆರಳುತ್ತಿದ್ದರೆನ್ನಲಾಗಿದೆ. ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

