ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ದೇವಾಲಯದ ಅಧೀನದಲ್ಲಿರುವ ಬಜಕೂಡ್ಲು ರಾಜದೈವ ಹಾಗೂ ಪರಿವಾರ ದೈವಗಳ ದೈವಸ್ಥಾನಗಳ ಜೀರ್ಣೋದ್ಧಾರ ಸಮಿತಿ ವತಿಯಿಂದ ಸಾರ್ವಜನಿಕ ಶ್ರೀದುರ್ಗಾಪೂಜೆ ಆ. 1ರಂದು ಸಂಜೆ 6ಕ್ಕೆ ಬಜಕೂಡ್ಲು ದೇವಸ್ಥಾನದಲ್ಲಿ ಜರುಗಲಿದೆ.
ದೇಲಂಪಾಡಿ ಅನಿರುದ್ಧ ತಂತ್ರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ. ರಾತ್ರಿ 8ಕ್ಕೆ ಮಹಾಮಂಗಲಾರತಿ, ಪ್ರಸಾದಭೋಜನ ವಿತರಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

