HEALTH TIPS

ದಿನಕ್ಕೆ ಎಷ್ಟು ಬಾರಿ ಮೊಬೈಲ್ ಚಾರ್ಜ್ ಮಾಡಬೇಕು ಗೊತ್ತಾ!? ಮೊಬೈಲ್ ಪ್ರಿಯರು ತಿಳಿಯಬೇಕು!

ಪೋನ್ ಬ್ಯಾಟರಿ ಬೇಗನೆ ಖಾಲಿಯಾಗಲು ಪ್ರಾರಂಭಿಸಿದರೆ ಅದು ತುಂಬಾ ಕಿರಿಕಿರಿ ಉಂಟುಮಾಡುತ್ತದೆ. ಪದೇ ಪದೇ ಬ್ಯಾಟರಿ ಡೆಡ್ ಆಯಿತು ಎಂದರೆ ಒಳ್ಳೆಯ ಹೊಸ ಫೋನ್ ಕೂಡ ಕೆಟ್ಟು ಹೋಗುತ್ತಿದೆ ಎಂದರ್ಥ. ನಾವು ಹೊಸ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇವೆ, ಆದರೆ ಫೋನ್ ಸ್ವಲ್ಪ ಹಳೆಯದಾಗಲು ಪ್ರಾರಂಭಿಸಿದಾಗ ಅದನ್ನು ಬೇಕಾಬಿಟ್ಟಿ ಉಪಯೋಗಿಸಿ ಅದರ ಕಾಳಜಿಯನ್ನು ಮರೆತುಬಿಡುತ್ತೇವೆ.

ಇದರಲ್ಲಿ ಮುಖ್ಯವಾಗಿ ಚಾರ್ಜ್ ಮಾಡುವುದು.

ಜನರು ಸಾಮಾನ್ಯವಾಗಿ ಕಡಿಮೆ ಬ್ಯಾಟರಿ ಇದ್ದಾಗ ಫೋನ್ ಅನ್ನು ಚಾರ್ಜ್ ಮಾಡಲು ಮುಂದಾಗುತ್ತಾರೆ. ಹಾಗಾದರೆ ಫೋನ್ ಅನ್ನು ದಿನಕ್ಕೆ ಎಷ್ಟು ಬಾರಿ ಚಾರ್ಜ್ ಮಾಡಬೇಕು?.ಚಾರ್ಜಿಂಗ್ ವಿಷಯಕ್ಕೆ ಬಂದರೆ, ತಮ್ಮ ಫೋನ್​ನಲ್ಲಿ ಬ್ಯಾಟರಿ ಸ್ವಲ್ಪ ಖಾಲಿಯಾದ ತಕ್ಷಣ ಅದನ್ನು ಚಾರ್ಜಿಂಗ್‌ಗೆ ಹಾಕುವುದನ್ನು ನಾವು ನಮ್ಮ ಸುತ್ತಲೂ ನೋಡುತ್ತೇವೆ. ಅಲ್ಲದೆ, ಫೋನ್ ಅನ್ನು ಚಾರ್ಜಿಂಗ್ ಮಾಡಿದ ಸ್ವಲ್ಪ ಸಮಯದ ನಂತರ ಮತ್ತೆ ಹೊರತೆಗೆಯುವವರೂ ಅನೇಕರಿದ್ದಾರೆ. ನಿಮಗೂ ಈ ಅಭ್ಯಾಸವಿದ್ದರೆ ನಿಮ್ಮ ಫೋನ್ ಬೇಗ ಕೆಟ್ಟು ಹೋಗಬಹುದು.

ಸ್ಮಾರ್ಟ್‌ಫೋನ್‌ಗೆ ಅದರ ಬ್ಯಾಟರಿಯೇ ಜೀವಾಳ. ಅತ್ಯುತ್ತಮ ಬ್ಯಾಟರಿ ಬಾಳಿಕೆ ಇದ್ದರೇ ಸ್ಮಾರ್ಟ್‌ಫೋನ್ ಹೆಚ್ಚು ಸಮಯ ಬಳಕೆ ಬರುತ್ತದೆ. ಈ ನಿಟ್ಟಿನಲ್ಲಿ ಮೊಬೈಲ್ ಕಂಪನಿಗಳು ಅಧಿಕ ಬ್ಯಾಟರಿ ಲೈಫ್ ಸಾಮರ್ಥ್ಯದಲ್ಲಿ ಸ್ಮಾರ್ಟ್‌ಫೋನ್‌ಗಳು ಪರಿಚಯಿಸುತ್ತಿವೆ. ಈಗಂತು ಮಾರ್ಕೆಟ್ ನಲ್ಲಿ 4000mAh ಯಿಂದ ಹಿಡಿದು 7000mAh ವರೆಗಿನ ಸಾಮರ್ಥ್ಯದ ಬ್ಯಾಟರಿ ಫೋನುಗಳು ಚಾಲ್ತಿಯಲ್ಲಿವೆ. ಹಾಗೆಯೇ ಬ್ಯಾಟರಿ ವೇಗವಾಗ ಭರ್ತಿಯಾಗಲಿ ಅಂತಾ ಫಾಸ್ಟ್‌ ಚಾರ್ಜರ್‌ ಸೌಲಭ್ಯವನ್ನು ನೀಡುತ್ತಿವೆ. ಅದಾಗ್ಯೂ ಒಂದು ದಿನಕ್ಕೆ ಎಷ್ಟು ಸಾರಿ ಫೋನ್ ಚಾರ್ಜ್ ಮಾಡಬಹುದು?.. ಪದೇ ಪದೇ ಫೋನ್ ಚಾರ್ಜ್ ಮಾಡಬಹುದೇ? ಎನ್ನುವ ಪ್ರಶ್ನೆಗಳು ಬಳಕೆದಾರರಲ್ಲಿ ಮೂಡಿರುತ್ತವೆ.

ಕೆಲವರು ರಾತ್ರಿ ಫೋನ್ ಚಾರ್ಜ್‌ಗೆ ಹಾಕಿ ಮಲಗಿಬಿಡುತ್ತಾರೆ. ಮತ್ತೆ ಕೆಲವರು ಫೋನ್ ಬ್ಯಾಟರಿ ಪೂರ್ಣ ಖಾಲಿಯಾಗುವವರೆಗೂ ಬಳಕೆ ಮಾಡುತ್ತಲೇ ಇರುತ್ತಾರೆ. ಇಂತಹ ಗೊಂದಲಗಳಿಗೆ ಉತ್ತರವಾಗಿ ಇಂದಿನ ಲೇಖನದಲ್ಲಿ ಫೋನ್ ಬ್ಯಾಟರಿ ಚಾರ್ಜ್ ಮಾಡುವಾಗ ಯಾವ ಕ್ರಮ ಅನುಸರಿಸಬೇಕು ಎನ್ನುವ ಬಗ್ಗೆ ತಿಳಿಸಲಾಗಿದೆ.

ಸ್ಮಾರ್ಟ್‌ಫೋನಿನ ಪ್ರಮುಖ ಅಂಗವೇ ಬ್ಯಾಟರಿ. ಫೋನಿಗೆ ಜೀವ ಒದಗಿಸುವ ಬ್ಯಾಟರಿ ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಅಂದರೇ ಸ್ಮಾರ್ಟ್‌ಫೋನ್ ಬ್ಯಾಟರಿ ಪೂರ್ಣ 0 ಆಗುವವರೆಗೂ ಫೋನ್ ಬಳಕೆ ಮಾಡುವುದು ಒಳ್ಳೆಯದಲ್ಲ. ಹೀಗಾಗಿ ಫೋನ್ ಬ್ಯಾಟರಿ ಯಾವತ್ತು ಡ್ರೈ ಆಗಲು ಬಿಡಲೇಬೇಡಿ. ಶೇ.30% ಸನಿಹ ಬಂದಾಗ ಚಾರ್ಜ್ ಮಾಡುವುದು ಉತ್ತಮ. ಪ್ರಸ್ತುತ ಇಂದಿನ ಬಹುತೇಕ ಸ್ಮಾರ್ಟ್‌ಫೋನ್‌ಗಳು ಲಿಥೀಯಮ್ ಬ್ಯಾಟರಿ ಗಳಿಗೆ ಅತೀಯಾದ ಬಿಸಿ ಮತ್ತು ಅತೀಯಾದ ತಂಪು ಆಗಿ ಬರುವುದಿಲ್ಲ. ಹೀಗಾಗಿ ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ ಎಚ್ಚರವಹಿಸಬೇಕು. ಅಗತ್ಯವಾಗ ಕ್ರಮಗಳನ್ನು ಅನುಸರಿಸಿ ಚಾರ್ಜ್ ಮಾಡುವುದು ಉತ್ತಮ.

ಬಹುತೇಕರು ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ ಫೋನ್ ಬಳಕೆ ಮಾಡುತ್ತಾರೆ. ಈ ರೀತಿ ಚಾರ್ಜ್ ಮಾಡುವಾಗ ಫೋನ್ ಬಳಕೆ ಮಾಡುವುದು ಬ್ಯಾಟರಿ ಲೈಫ್‌ಗೂ ಧಕ್ಕೆ ಹಾಗೂ ಅಪಾಯದ ಸಾಧ್ಯತೆಗಳು ಅಧಿಕವಾಗಿರುತ್ತವೆ. ಚಾರ್ಜಿಂಗ್ ವೇಳೆ ಸಾಧ್ಯವಾದಷ್ಟು ಸ್ಮಾರ್ಟ್‌ಫೋನ್ ಬಳಕೆ ಮಾಡದೇ ಇರುವುದು ಅತೀ ಉತ್ತಮ. ಅಂತೆಯೆ ಒಂದೇ ಸಾರಿ ಪೂರ್ಣ ಚಾರ್ಜ್ ಮಾಡಲೇಬೇಡಿ. ಹೌದು ಸ್ಮಾರ್ಟ್‌ಫೋನ್ ಬ್ಯಾಟರಿ ಪೂರ್ಣ ಖಾಲಿಯಾಗಿದ್ದಾಗ ಫೋನ್ ಚಾರ್ಜಿಂಗ್ ಹಾಕಿ. ಆದರೆ ಫೋನ್ 0% ಪರ್ಸೆಂಟ್‌ನಿಂದ 100% ವರೆಗೆ ಪೂರ್ಣ ಚಾರ್ಜ್ ಮಾಡಲೇಬೇಡಿ. ಹೀಗೆ ಒಂದೇ ಬಾರಿಗೆ ಶೂನ್ಯದಿಂದ ಪೂರ್ಣ ಚಾರ್ಜ್ ಬ್ಯಾಟರಿ ಬಾಳಿಕೆಗೆ ಹಾನಿ ಉಂಟು ಮಾಡುವ ಸಾಧ್ಯತೆಗಳಿರುತ್ತವೆ. ಸುಮಾರು 60% ನಿಂದ 75% ಪರ್ಸೆಂಟ್ ನಡುವೆ ಇದ್ದಾಗ ಚಾರ್ಜಿಂಗ್ ತೆಗೆಯಿರಿ.

ಒಂದು ದಿನಕ್ಕೆ ಒಂದೇ ಬಾರಿ ಚಾರ್ಜ್ ಮಾಡಬೇಕು ಎಂದೆನಿಲ್ಲ. ಆದರೆ ದಿನಕ್ಕೆ ಎರಡು-ಮೂರು ಬಾರಿ ಚಾರ್ಜ್ ಮಾಡುವುದರಿಂದ ಏನು ಸಮಸ್ಯೆ ಇಲ್ಲ. ಸಾಧ್ಯವಾದಷ್ಟು ಫೋನ್ ಬ್ಯಾಟರಿಯನ್ನು 60% ನಿಂದ 75% ಪರ್ಸೆಂಟ್ ನಡುವೆ ಇರುವಂತೆ ನೋಡಿಕೊಳ್ಳಿ, ಅದಾಗ್ಯೂ ಚಾರ್ಜ್ ಅನಿವಾರ್ಯ ಎಂದಾಗ ಚಾರ್ಜ್ ಮಾಡಿ ಆದರೆ ಪದೇ ಪದೇ ಚಾರ್ಜ್ ಅಂತೂ ಮಾಡಲೆಬೇಡಿ. ಅಲ್ಲದೆ ಸ್ಮಾರ್ಟ್‌ಫೋನ್‌ನಲ್ಲಿ ಲೊಕೇಶನ್, ವೈಫೈ, ಬ್ಲೂಟೂತ್, ಹಾಟ್‌ಸ್ಪಾಟ್, ವೈಬ್ರೆಷನ್‌ ಮೋಡ್ ಇಂತಹ ಸೇವೆಗಳನ್ನು ಆಫ್‌ ಮಾಡುವುದು ಬ್ಯಾಟರಿ ಚಾರ್ಜಿಂಗ್‌ಗೆ ಪೂರಕ ಅನಿಸುತ್ತದೆ. ಹೀಗಾಗಿ ಚಾರ್ಜ್ ಮಾಡುವಾಗ ಈ ಸೇವೆಗಳನ್ನು ಆಫ್ ಮಾಡಿಬಿಡಿ. ಅಗತ್ಯ ಇದ್ದಾಗ ಮಾತ್ರ ಈ ಸೇವೆಗಳನ್ನು ಸಕ್ರಿಯ ಮಾಡಿಕೊಳ್ಳಿರಿ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries