ಕಾಸರಗೋಡು: ಬಂಟರ ಸಂಘದ ಮಧೂರು ಸಮಿತಿಯ ಮಾಸಿಕ ಸಭೆ ಮಧೂರು ಪರಕ್ಕಿಲದಲ್ಲಿರುವ ಸಂಘದ ಕಾರ್ಯಾಲಯದಲ್ಲಿ ಜರುಗಿತು. ಅಧ್ಯಕ್ಷ ಶ್ರೀ ರಾಮಕೃಷ್ಣ ಆಳ್ವ ಕುತ್ತಾರ್ ಗುತ್ತು ಅಧ್ಯಕ್ಷತೆ ವಹಿಸಿದ್ದರು. ಆಗಸ್ಟ್ ತಿಂಗಳ 10 ರಂದು ಮಂಗಲ್ಪಾಡಿಯಲ್ಲಿ ನಡೆಯಲಿರುವ ಕಾಸರಗೋಡು ಜಿಲ್ಲಾ ಬಂಟರ ಸಮ್ಮಿಲನ ಹಾಗೂ ಅಟಿದ ಕೂಟ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಸರಗೋಡು ವಲಯ ಬಂಟರ ಸಂಘದ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಕುಚ್ಚಿಕ್ಕಾಡು ತಿಳಿಸಿದರು.
ಕೋಶಾಧಿಕಾರಿ ಅಶೋಕ್ ರೈ ಸೂರ್ಲು, ಮಧೂರು ಸಮಿತಿ ಅಧ್ಯಕ್ಷ ರಾಮಕೃಷ್ಣ ಆಳ್ವ, ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷೆ ಶ್ಯಾಮಲಾ ಎಂ ಶೆಟ್ಟಿ, ಮಹಾಬಲ ಶೆಟ್ಟಿ ಕುದ್ರೆಪ್ಪಾಡಿ, ಉಮೇಶ್ ಶೆಟ್ಟಿ ಸೂರ್ಲು, ಸತೀಶ ಆಳ್ವ ಕುತ್ತಾರು ಗುತ್ತು, ಮಹಿಳಾ ಸಮಿತಿಯ ಗೌರವ ಅಧ್ಯಕ್ಷೆ ಜನಪ್ರಿಯ ನಾಟಿ ವೈದ್ಯೆ ಯಮುನಾ ಎಸ್ ಶೆಟ್ಟಿ ಕೂಡ್ಲು ಹೊಸಮನೆ, ಅಧ್ಯಕ್ಷೆ ಶ್ಯಾಮಲಾ ಎಂ ಶೆಟ್ಟಿ ಕುದ್ರೆಪ್ಪಾಡಿ, ಜಯಲಕ್ಷ್ಮೀ ಅಡಪ ಕೂಡ್ಲು, ಶುಭಲತಾ ಕೊಲ್ಯ, ಅಶೋಕ್ ಮಧೂರು ಉಪಸ್ಥಿತರಿದ್ದರು. ಕ್ಕಾರ್ಯದರ್ಶಿ ಗಣೇಶ್ ರೈ ಸ್ವಾಗತಿಸಿ, ವಂದಿಸಿದರು.

