ಉಪ್ಪಳ: ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆಯ ಕಾರ್ಯವೈಖರಿ, ಸರ್ವಧಿಕಾರಿ ಧೋರಣೆ, ಜಿಲ್ಲಾ ಸಮಿತಿಯ ಬೇಜವಾಬ್ದಾರಿತನ, ಮಂಡಲ ಸಮಿತಿ ಸದಸ್ಯ ಕೆ.ಪಿ.ಪ್ರಶಾಂತ್ ಅವರನ್ನು ಇಲ್ಲದ ಅಧಿಕಾರ ಉಪಯೋಗಿಸಿ ಪಕ್ಷದಿಂದ ಅಮಾನತು ಮಾಡಿರುವ ವಿಚಾರ ಮೊದಲಾದವುಗಳಿಂದ ಹೊಗೆಯಾಡುತ್ತಿರುವ ಒಂದು ಕಾಲದ ಬಿಜೆಪಿಯ ಶಕ್ತಿಕೇಂದ್ರವಾದ ಪೈವಳಿಕೆಯಲ್ಲಿ ಇದೀಗ ಅತೃಪ್ತಿ ವ್ಯಾಪಕ ಪ್ರಮಾಣದಲ್ಲಿ ವ್ಯಾಪಿಸುತ್ತಿದ್ದು, ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ಸಂದರ್ಭ ಬಿಜೆಪಿಗೆ ತೀವ್ರ ಹಿನ್ನಡೆಯ ಸೂಚನೆ ನೀಡಿದೆ.
ಕಾರ್ಯಕರ್ತರ, ಸ್ಥಳೀಯ ಮುಖಂಡರ ಸಮಸ್ಯೆ, ದೂರು-ದುಮ್ಮಾನಗಳನ್ನು ಮಾತುಕತೆ ಮೂಲಕ ಬಗೆಹರಿಸುವ ಬದಲು ಅನಗತ್ಯ ಸಮಸ್ಯೆಗಳನ್ನು ಜಿಲ್ಲಾ ಅಧ್ಯಕ್ಷರೇ ಉಂಟುಮಾಡುತ್ತಿರುವ ಏಕಪಾಕ್ಷಿಯ ನಿರ್ಧಾರಗಳು, ಮಂಡಲ ಸಮಿತಿ ಸದಸ್ಯ ಕೀರ್ತಿಸುಬ್ರಮಣ್ಯ ಭಟ್ ಅವರು ಈ ಬಗ್ಗೆ ವಿಚಾರ ಮುಂದಿಟ್ಟಾಗ ಅವರನ್ನೇ ಬಲಿಪಶುಮಾಡುವ ಹುನ್ನಾರದ ಮಧ್ಯೆ ಅವರು ರಾಜೀನಾಮೆ ನೀಡಿದ್ದರು ಅವರನ್ನು ಮತ್ತೆ ಪಕ್ಷಕ್ಕೆ ತರುವ ಬದಲು ಅವರನ್ನೇ ಅವಮಾನಿಸುತ್ತಿರುವ ಜಿಲ್ಲಾ ಸಮಿತಿಯ ಧೋರಣೆ, ಜಿಲ್ಲಾ ಅಧ್ಯಕ್ಷರಿಗೆ ಸಮಾಜ ವಿರೋಧಿ ಸಂಘಟನೆಯಾದ ಎಸ್.ಡಿ.ಪಿ.ಐ ಜೊತೆಗಿರುವ ಒಡನಾಟ ಪ್ರಶ್ನೆಸಿದವರನ್ನು ಪಕ್ಷದಿಂದ ಹಿಂದೆ ತಳ್ಳುವ ಧೋರಣೆ, ಜವಾಬ್ದಾರಿ ಸ್ಥಾನದಲ್ಲಿ ಇದ್ದು ಸುಳ್ಳು ಹೇಳುವ ನಡವಳಿಕೆ, ಪೈವಳಿಕೆಯ ಕಾರ್ಯಕರ್ತರನ್ನು ಅವಮಾನಿಸುವ ಪ್ರವೃತ್ತಿ, ಅನೇಕ ಹಿರಿಯ ನೇತಾರರನ್ನು ಕಡೆಗಣಿಸಿ ರಾಜಕೀಯ ಅನುಭವ ಇಲ್ಲದವರನ್ನು ಜಿಲ್ಲೆಯಲ್ಲಿ ನೇಮಕ ಮಾಡುವಾಗ ಪಂಚಾಯತಿ ಅಧಿಕೃತರಲ್ಲಿ ಚರ್ಚಿಸದೆ ಇದುದ್ದು, ಹೀಗೆ ಅನೇಕ ವಿಚಾರಗಳಲ್ಲಿ ಬಿನ್ನಾಭಿಪ್ರಾಯಗಳಿಂದ ಪಕ್ಷ ಸಂಘಟನೆ ಪೈವಳಿಕೆಯಲ್ಲಿ ಅಸಾಧ್ಯವಾಗಿದೆ. ಕಾರ್ಯಕರ್ತರ ಬೇಡಿಕೆಗೆ ಸ್ಪಂದಿಸದೆ ಇದ್ದರೆ, ಮತ್ತು ಸ್ವಾಭಿಮಾನ ಬಿಟ್ಟು ಜವಾಬ್ದಾರಿ ಸ್ಥಾನದಲ್ಲಿ ಕೆಲಸ ಮಾಡಲು ತಮ್ಮಿಂದ ಸಾಧ್ಯವಿಲ್ಲ ಎಂದು ಪೈವಳಿಕೆ ಬಿಜೆಪಿ ಸೌತ್ ಹಾಗೂ ನಾರ್ತ್ ಸಮಿತಿ ಅಧ್ಯಕ್ಷ ರಾದ ಸತ್ಯಶಂಕರ ಭಟ್, ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಪ್ರವೀಣ್ ಕುಮಾರ್ ರೈ, ಸೌತ್ ಸಮಿತಿ ಅಧ್ಯಕ್ಷ ಅಟಿಕುಕ್ಕೆ ಸುಬ್ರಮಣ್ಯ ಭಟ್, ಪ್ರ ಕಾರ್ಯದರ್ಶಿ ಜಯಶಂಕರ್ ಮುನ್ನೂರು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿರುವರು. ರಾಜ್ಯ, ಜಿಲ್ಲಾ, ಮಂಡಲ ಅಧ್ಯಕ್ಷರುಗಳಿಗೆ ರಾಜಿನಾಮೆ ಪತ್ರ ಬುಧವಾರ ರವಾನಿಸಲಾಗಿದೆ.
ಕೆ.ಪಿ.ಪ್ರಶಾಂತ್ ಅವರನ್ನು ಅಮಾನತು ಮಾಡಲು ಸಲಹೆ ನೀಡಿದ್ದ ವ್ಯಕ್ತಿಯನ್ನೇ ಪೈವಳಿಕೆಗೆ ಚುನಾವಣಾ ಉಸ್ತುವಾರಿಯಾಗಿ ನೇಮಕ ಮಾಡಿದ್ದು, ಸಮಸ್ಯೆ ಪರಿಹಾರಕ್ಕೆ ಸಮಸ್ಯೆ ಉಂಟು ಮಾಡಿದವರನ್ನೇ ನೇಮಕ ಮಾಡಿರುವುದನ್ನು ವಿರೋಧಿಸಿರುವುದು ರಾಜಿನಾಮೆಗೆ ಕಾರಣ ಎಂದು ಕಾರ್ಯಕರ್ತರು ಮಾತನಾಡುತ್ತಿದ್ದಾರೆ.
ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ಕಾರ್ಯಕರ್ತರ ಆಶಯಕ್ಕೆ ಬದ್ದವಾಗಿ ಪಕ್ಷ ಸಂಘಟನೆ ಮಾಡಬೇಕು ಹಾಗೂ ಪಂಚಾಯತಿ ಚುನಾವಣೆಗೆ ಸಜ್ಜಗಬೇಕು. ಇಲ್ಲವಾದಲ್ಲಿ ಪಕ್ಷ ಗೆಲ್ಲಲು ಸಾಧ್ಯವಿಲ್ಲ ಎಂದು ಕಾರ್ಯಕರ್ತರು ಬೇಗುದಿ ತೋಡಿಕೊಂಡಿದ್ದಾರೆ.





.jpg)
