ಕಾಸರಗೋಡು: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕೇರಳ ರಾಜ್ಯ ಪಿಂಚಣಿದಾರರ ಸಂಘ್ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಯಿತು.
ಹನ್ನೆರಡನೇ ಪಿಂಚಣಿ ಸುಧಾರಣಾ ಪ್ರಕ್ರಿಯೆ ತಕ್ಷಣ ಆರಂಭಿಸಬೇಕು, ಶಾಸನಬದ್ಧ ಪಿಂಚಣಿ ಮರುಸ್ಥಾಪಿಸಬೇಖು, 11ನೇ ಪಿಂಚಣಿ ಸುಧಾರಣೆಯಲ್ಲಿನ ಕ್ಷಾಮ ಪರಿಹಾರ ಬಾಕಿಯ ಎರಡನೇ ಕಂತನ್ನು ತಕ್ಷಣ ಬಿಡುಗಡೆಮಾಡಬೇಕು, ಜನವರಿ 2021 ರಿಂದ ಜನವರಿ 2022 ರವರೆಗೆ ನೀಡಲಾದ ಕ್ಷಾಮ ಪರಿಹಾರದ ಕ್ಷಾಮ ಭತ್ತೆಯ ಶೇ.18 ಮೊತ್ತ ಜತೆಗೆ 118 ತಿಂಗಳ ಬಾಕಿ ಹಣವನ್ನು ತಕ್ಷಣ ಬಿಡುಗಡೆಗೊಳಿಸುವುದು, ಸರ್ಕಾರದ ಕೊಡುಗೆಯೊಂದಿಗೆ ಮೆಡಿಸೇಫ್ ಆರೋಗ್ಯ ವಿಮಾ ಯೋಜನೆಯ ಸುಗಮ ಅನುಷ್ಠಾನ, ಬೆಲೆ ಏರಿಕೆ ತಡೆಗಟ್ಟುವುದು ಮುಂದಾದ ಬೇಡಿಕೆ ಮುಂದಿರಿಸಿ ಧರಣಿ ಆಯೋಜಿಸಲಾಗಿತ್ತು.
ಕೇರಳ ರಾಜ್ಯ ಪಿಂಚಣಿದಾರರ ಸಂಘದ ರಾಜ್ಯ ಕಾರ್ಯದರ್ಶಿ ಕೆ.ಟಿ.ಮಧುಸೂದನನ್ ಧರಣಿ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಬಿ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಕೆ.ಮುತ್ತುಕೃಷ್ಣನ್, ಈಶ್ವರ್ ರಾವ್, ಸವಿತಾ ಟೀಚರ್, ನಾರಾಯಣನ್ ಮಾಸ್ಟರ್, ದಿಲೀಪ್ ಕುಮಾರ್, ಅಶೋಕ್ ಬಾಡೂರ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಕುಞÂರಾಮನ್ ಕೇಳೋತ್ ಸ್ವಾಗತಿಸಿದರು. ಜಿಲ್ಲಾ ಜತೆ ಕಾರ್ಯದರ್ಶಿ ವಿ.ಕೆ ಕುಞಂಬು ವಂದಿಸಿದರು. ಧರಣಿಗೂ ಮುಂಚಿತವಾಗಿ ಸದಸ್ಯರಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.




