ಕಾಸರಗೋಡು: ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು. ಕಾಸರಗೋಡು ಪಿಲಿಕುಂಜೆಯಲ್ಲಿರುವ ಲೆಫ್ಟಿನೆಂಟ್ ಕರ್ನಲ್ ಪಿ.ಮುಹಮ್ಮದ್ ಹಾಶಿಂ ಅವರ ಸ್ಮಾರಕ ಭವನದಲ್ಲಿ ಪಕ್ಷದ ಮುಖಂಡರು ಪುಷ್ಪಗುಚ್ಛ ಸಮರ್ಪಿಸಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ, ವಕೀಲ ಬಿ.ಗೋಪಾಲಕೃಷ್ಣನ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕಾರ್ಗಿಲ್ ವಿಜಯ ದಿನವು ಭಾರತಕ್ಕೆ ಹೆಮ್ಮೆಯ ದಿನವಾಗಿದೆ.ಪಾಕಿಸ್ತಾನದ ಆಕ್ರಮಣವನ್ನು ವಿರೋಧಿಸುವ ಮತ್ತು ಅವರನ್ನು ಹಿಮ್ಮೆಟ್ಟಿಸುವ ಸಾಮಥ್ರ್ಯವುಳ್ಳ ನಮ್ಮ ಧೀರ ಯೋಧರಿಗೆ ಸಂಪೂರ್ಣ ಅಧಿಕಾರ ನೀಡುವ ಮೂಲಕ ಅಂದಿನ ಪ್ರಧಾನಿ ವಾಜಪೇಯಿ ಅವರ ದಿಟ್ಟತನ ದೇಶಕ್ಕೆ ಮಾದರಿಯಾಗಿದೆ. ಅನೇಕ ಧೈರ್ಯಶಾಲಿ ಹಾಗೂ ಧೀಮಂತ ಸೈನಿಕರು ಭಾರತಕ್ಕೆ ವಿಜಯ ತಂದುಕೊಡುವಲ್ಲಿ ಹೋರಾಟ ನಡೆಸಿ ದೇಶಕ್ಕಾಗಿ ಪ್ರಾಣ ತೆತ್ತಿದ್ದರು. ಕೇಂದ್ರದಲ್ಲಿನ ಬಲಿಷ್ಠ ನಾಯಕತ್ವದಿಂದಾಗಿ ಭಾರತ ವಿಶ್ವ ರಾಷ್ಟ್ರಗಳ ಮುಂದೆ ತಲೆ ಎತ್ತಿ ನಿಲ್ಲಲು ಸಾಧ್ಯವಾಗಿದೆ ಎಂದು ತಿಳಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ
ಸೆಲ್ ಸಂಯೋಜಕ, ವಕೀಲ ವಿ.ಕೆ.ಸಜೀವನ್, ಕೋಯಿಕ್ಕೋಡ್ ವಲಯ ಸಮಿತಿ ಅಧ್ಯಕ್ಷ ಕೆ.ಶ್ರೀಕಾಂತ್, ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್.ಸುನೀಲ್, ಎನ್.ಬಾಬುರಾಜ್, ಮನುಲಾಲ್ ಮೇಲತ್, ಮಾಜಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ರಾಷ್ಟ್ರೀಯ ಸಮಿತಿ
ಸದಸ್ಯ ಎಂ.ಸಂಜೀವ ಶೆಟ್ಟಿ, ಉಪಾಧ್ಯಕ್ಷರಾದ ಎಂ.ಜನನಿ, ಎಂ.ಭಾಸ್ಕರನ್, ಪಿ.ರಮೇಶ್, ಕಾರ್ಯದರ್ಶಿ ಪ್ರಮೀಳಾ ಮಜಲ್, ಎ.ವೇಲಾಯುಧನ್, ಸವಿತಾ ಟೀಚರ್, ವೈ.ಕೃಷ್ಣದಾಸ್ ಮತ್ತಿತರರು ಉಪಸ್ಥಿತರಿದ್ದರು.





