ಉಪ್ಪಳ: ಕುರುಡಪದವು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಸಾಲಿನ ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಬುಧವಾರ ಜರಗಿತು. ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶಾಲಾ ವ್ಯವಸ್ಥಾಪಕ ಸಮಿತಿ ಸದಸ್ಯರೂ, ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಶಂಕರನಾರಾಯಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಪದ್ಮನಾಭ ಬರ್ಲಾಯ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ ಕಳೆದ ವರ್ಷದ ಆಯವ್ಯಯ ಪಟ್ಟಿ ಮಂಡಿಸಿದರು. ಶಿಕ್ಷಕ ಪ್ರಶಾಂತ್ ಕುಮಾರ್ ರಿಕ್ಷಾದ ವ್ಯವಸ್ಥೆಯ ಖರ್ಚಿನ ಸವಿವರವಾದ ಮಾಹಿತಿಯನ್ನು ನೀಡಿದರು. ಮುಖ್ಯೋಪಾಧ್ಯಾಯರು ಶಾಲಾ ವಾರ್ಷಿಕೋತ್ಸವ ನಂತರದ ಈವರೆಗಿನ ಶಾಲಾ ಚಟುವಟಿಕೆಯನ್ನೂ, ಶಾಲಾಭಿವೃದ್ಧಿಯನ್ನು ತಿಳಿಸುವುದರೊಂದಿಗೆ ಶಾಲೆಯ ಮುಂದಿನ ಯೋಜನೆಗಳ ಬಗ್ಗೆ ರಕ್ಷಕರಿಗೆ ಮಾಹಿತಿ ನೀಡಿದರು.
ಶಾಲಾ ವ್ಯವಸ್ಥಾಪಕಿ ಪರಮೇಶ್ವರಿ ಪಿ.ಎಚ್. ಶಾಲಾಭಿವೃದ್ಧಿಯ ಬಗ್ಗೆ, ರಕ್ಷಕರಿಗೆ ಸಲಹೆ-ಸೂಚನೆಗಳನ್ನು ನೀಡಿದರು. ಹಿಂದಿ ಶಿಕ್ಷಕ ಸತೀಶ್ ಸುವರ್ಣ ಶಾಲಾ ಶಿಸ್ತಿನ ಬಗ್ಗೆ ಸಮಗ್ರವಾದ ಮಾಹಿತಿ ನೀಡಿದರು. 2025-26ನೇ ಶೈಕ್ಷಣಿಕ ಸಾಲಿನ ರಕ್ಷಕ-ಶಿಕ್ಷಕ ಸಂಘದ ನೂತನ ಪದಾಧಿಕಾರಿಗಳನ್ನು, ಮಾತೃ ಮಂಡಳಿ ಸದಸ್ಯರನ್ನು ಆರಿಸಲಾಯಿತು.
2025-26 ಶೈಕ್ಷಣಿಕ ಸಾಲಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಬಷೀರ್ ಸಾಪ್ಕೋ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ಜೈ ಗಣೇಶ್ ಮುಂಡ್ರಕಜೆ, ಅಬ್ದುಲ್ ರೆಹಮಾನ್ ಕಾಡೂರು ಆಯ್ಕೆಯಾದರು. ಮಾತೃ ಮಂಡಳಿ ಅಧ್ಯಕ್ಷೆಯಾಗಿ ಹಸೀನಾ ಕುರುಡಪದವು, ಉಪಾಧ್ಯಕ್ಷೆಯರಾಗಿ ಸುಭಾಷಿಣಿ ಕುರುಡಪದವು, ಅಶ್ವಿತ ಆಯ್ಕೆಯಾದರು. 2024-25ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ರಾಘವ ಕುರಿಯ ಅವರು ಮಾತನಾಡಿ, ತನ್ನ ಅಧ್ಯಕ್ಷೀಯ ಕಾಲದ ಅನುಭವವನ್ನು ಹಂಚಿಕೊಂಡರು. ಹೊಸದಾಗಿ ಆಯ್ಕೆಯಾದ ರಕ್ಷಕ ಶಿಕ್ಷಕ ಅಧ್ಯಕ್ಷ ಬಷೀರ್ ಸಾಪ್ಕೋ ಮಾತನಾಡಿದರು. ಮಾತೃ ಮಂಡಳಿ ಅಧ್ಯಕ್ಷೆಯಾಗಿ ಪುನರ್ ಆಯ್ಕೆಯಾದ ಹಸೀನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಿವೃತ್ತ ಮುಖ್ಯೋಪಾಧ್ಯಾಯ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಪ್ರಶಾಂತ್ ಕುಮಾರ್ ಅಮ್ಮೇರಿ ವಂದಿಸಿದರು. ಶಿಕ್ಷಕಿ ಅರ್ಚನಾ ಕಾರ್ಯಕ್ರಮ ನಿರೂಪಿಸಿದರು.




.jpg)
.jpg)
