ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಧೀನದಲ್ಲಿರುವ ಬಜಕೂಡ್ಲು ರಾಜಂದೈವ ಹಾಗೂ ಪರಿವಾರ ದೈವಗಳ ದೈವಸ್ಥಾನಗಳ ಜೀರ್ಣೋದ್ಧಾರ ಸಮಿತಿ ವಿಶೇಷ ಸಭೆ ಮತ್ತು ಶ್ರೀದೇವರ ಬಲಿವಾಡು ಕೂಟ ಜುಲೈ 6ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಲಿದೆ.
ಅಂದು ಬೆಳಗ್ಗೆ 10ಕ್ಕೆ ನಡೆಯುವ ವಿಶೇಷ ಸಭೆಯಲ್ಲಿ ಉದ್ಯಮಿ, ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ ವಿಶೇಷ ಆಹ್ವಾನಿತರಾಗಿ ಮಾರ್ಗದರ್ಶನ ನೀಡುವರು. ಮಧ್ಯಾಃನ ಬಲಿವಾಡು ಕೂಟ ನಡೆಯುವುದಾಗಿ ಪ್ರಕಟಣೆ ತಿಳಿಸಿದೆ.

