HEALTH TIPS

ಅವಧಿ ಮುಗಿದ ಔಷಧಗಳನ್ನು ಶೌಚಾಲಯಕ್ಕೆ ಹಾಕಿ ಫ್ಲಷ್ ಮಾಡಿ: CDSCO ಸಲಹೆ

ನವದೆಹಲಿ: 'ಸಾಕುಪ್ರಾಣಿಗಳು ಹಾಗೂ ಜನರಿಗೆ ಹಾನಿ ಉಂಟುಮಾಡುವುದನ್ನು ತಪ್ಪಿಸಲು ಅವಧಿ ಮುಗಿದ ಅಥವಾ ಬಳಸದ 17 ಬಗೆಯ ಔಷಧಗಳನ್ನು ಕಸದ ಬುಟ್ಟಿಗೆ ಎಸೆಯುವ ಬದಲಾಗಿ ಅವುಗಳನ್ನು ಶೌಚಾಲಯಕ್ಕೆ ಹಾಕಿ ಫ್ಲಷ್ ಮಾಡಬೇಕು' ಎಂದು ಕೇಂದ್ರ ಔಷಧ ನಿಯಂತ್ರಣ ಗುಣಮಟ್ಟ ಸಂಸ್ಥೆ (ಸಿಡಿಎಸ್‌ಸಿಒ) ಸೂಚನೆ ನೀಡಿದೆ.

'ಇದರಲ್ಲಿ ಟ್ರಾಮಡಾಲ್‌, ಟಪೆಂಟಡಾಲ್‌, ಡಯಾಝೆಪಮ್‌, ಆಕ್ಸಿಕೊಡೊನ್‌ ಹಾಗೂ ಫೆಂಟಾನೈಲ್‌ ಔಷಧಗಳು ಹಾನಿಕರವಾಗಿದ್ದು, ವೈದ್ಯರ ಸಲಹೆ ಪಡೆಯದೆ ಅವನ್ನು ಸೇವಿಸಿದರೆ, ಪ್ರಾಣಹಾನಿ ಸಂಭವಿಸುವ ಸಾಧ್ಯತೆಯೂ ಇದೆ' ಎಂದು ತಿಳಿಸಿದೆ.

ಈ ಎಲ್ಲಾ ಔಷಧಗಳನ್ನು ಹೆಚ್ಚಾಗಿ ನೋವು ನಿವಾರಣೆಗೆ, ಒತ್ತಡ ನಿವಾರಣೆಗೆ ಅಥವಾ ಇನ್ನಿತರ ಪರಿಸ್ಥಿತಿಗಳಲ್ಲಿ ಬಳಸಲಾಗುತ್ತದೆ.

ಅವಧಿ ಮುಗಿದ ಹಾಗೂ ಬಳಸದ ಔಷಧಗಳನ್ನು ಸುರಕ್ಷಿತ ರೀತಿಯಲ್ಲಿ ಹಾಗೂ ಸರಿಯಾಗಿ ವಿಲೇವಾರಿ ಮಾಡುವುದು ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕರ ಆರೋಗ್ಯದ ನಿಟ್ಟಿನಲ್ಲಿ ಮಹತ್ವದ್ದಾಗಿದ್ದು, ಈ ಕುರಿತು ಮಾರ್ಗದರ್ಶಿಗಳನ್ನು ಬಿಡುಗಡೆಗೊಳಿಸಿದೆ.

'ಈ ಉತ್ಪನ್ನಗಳ ಗುಣಮಟ್ಟ, ಸುರಕ್ಷತೆ ಹಾಗೂ ಪರಿಣಾಮಕಾರಿ ತತ್ವವನ್ನು ಖಾತರಿಪಡಿಸಿ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ' ಎಂದು ಸಿಡಿಎಸ್‌ಸಿಒ ತಿಳಿಸಿದೆ.

'ಅವಧಿ ಮುಗಿದ ಔಷಧಗಳನ್ನು ಸರಿಯಾಗಿ ವಿಲೇವಾರಿ ಮಾಡದಿದ್ದರೆ, ಮನುಷ್ಯರು, ಪ್ರಾಣಿ ಹಾಗೂ ಪರಿಸರದ ಮೇಲೆ ಹಾನಿ ಆಗಲಿದೆ. ಅಲ್ಲದೇ, ನೀರನ್ನೂ ಕಲುಷಿತಗೊಳಿಸುವ ಸಾಧ್ಯತೆಯಿದ್ದು, ವನ್ಯಜೀವಿಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ಜಾಡಮಾಲಿಗಳು ಅಥವಾ ಮಕ್ಕಳ ಕೈಗೆ ಸಿಕ್ಕಿದರೆ ಅಪಾಯದ ಸಾಧ್ಯತೆ ಹೆಚ್ಚು. ಅವುಗಳನ್ನು ಪ್ರತ್ಯೇಕಿಸುವ ವೇಳೆ ಅವುಗಳು ಮಾರುಕಟ್ಟೆ ಪ್ರವೇಶಿಸಿ, ಮರು ಮಾರಾಟವಾಗುವ ಸಾಧ್ಯತೆಯಿದೆ' ಎಂದು ಎಚ್ಚರಿಕೆ ನೀಡಿದೆ.

  • ಅವಧಿ ಮುಗಿದ ಅಥವಾ ಬಳಕೆಯಾಗದ ಔಷಧಗಳನ್ನು ಹಿಂದಕ್ಕೆ ಪಡೆಯಲು ಕ್ರಮವಹಿಸಿ

  • ಸ್ಥಳ ನಿಗದಿಪಡಿಸಿ, ಕಾರ್ಯಕ್ರಮಗಳನ್ನು ಆಯೋಜಿಸಿ

  • ರಾಜ್ಯ ಔಷಧ ನಿಯಂತ್ರಣ ವಿಭಾಗ, ಔಷಧ ಒಕ್ಕೂಟಗಳಿಗೆ ಸೂಚನೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries