HEALTH TIPS

ಪತ್ನಿ ವಿರುದ್ಧ ವ್ಯಭಿಚಾರ ಆರೋಪ: ಮಗುವಿನ DNA ಪರೀಕ್ಷೆ ನಡೆಸಬೇಕಿಲ್ಲ; ಬಾಂಬೆ HC

ಮುಂಬೈ: ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಮೇಲೆ ವ್ಯಭಿಚಾರದ ಅನುಮಾನವಿದೆ ಎಂಬ ಕಾರಣಕ್ಕೆ ಆತನ ಅಪ್ರಾಪ್ತ ಮಗುವಿಗೆ ಡಿಎನ್‌ಎ ಪರೀಕ್ಷೆ ನಡೆಸುವಂತೆ ಒತ್ತಾಯಿಸುವಂತಿಲ್ಲ ಎಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ಅಭಿಪ್ರಾಯಪಟ್ಟಿದೆ.

ಅಪ್ರಾಪ್ತ ಬಾಲಕನ ಡಿಎನ್‌ಎ ಪರೀಕ್ಷೆಗೆ ನಿರ್ದೇಶಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದ ನ್ಯಾಯಮೂರ್ತಿ ಆರ್.ಎಂ.ಜೋಶಿ ನೇತೃತ್ವದ ಪೀಠ, ಡಿಎನ್‌ಎ ಪರೀಕ್ಷೆಗೆ ಅಸಾಧಾರಣ ಪ್ರಕರಣಗಳಲ್ಲಿ ಮಾತ್ರ ಆದೇಶಿಸಲಾಗುತ್ತದೆ ಎಂದು ಹೇಳಿದೆ.

ವ್ಯಭಿಚಾರದ ಆಧಾರದ ಮೇಲೆ ಪುರುಷನೊಬ್ಬ ವಿಚ್ಛೇದನಕ್ಕೆ ಅರ್ಹನೆಂದು ಹೇಳಿಕೊಂಡ ಮಾತ್ರಕ್ಕೆ ಡಿಎನ್‌ಎ ಪರೀಕ್ಷೆಗೆ ನಿರ್ದೇಶನ ನೀಡುವ ಆದೇಶವನ್ನು ಅಂಗೀಕರಿಸಲು ಆಗುವುದಿಲ್ಲ. ಡಿಎನ್‌ಎ ಪರೀಕ್ಷೆಗೆ ನಿರ್ದೇಶಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿಯಲು ಇದು ಒಂದು ಪ್ರಮುಖ ಪ್ರಕರಣವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕೆ ಸ್ಪಷ್ಟ ಉತ್ತರವೆಂದರೆ 'ಇಲ್ಲ' ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪತ್ನಿಯ ವಿರುದ್ಧ ವ್ಯಭಿಚಾರದ ಆರೋಪವಿದ್ದರೆ, ಮಗುವನ್ನು ಪಿತೃತ್ವ ಪರೀಕ್ಷೆಗೆ ಒಳಪಡಿಸುವ ಬದಲು ಬೇರೆ ಯಾವುದೇ ಪುರಾವೆಗಳ ಮೂಲಕ ಅದನ್ನು ಸಾಬೀತುಪಡಿಸಬಹುದು ಎಂದು ನ್ಯಾಯಪೀಠ ತಿಳಿಸಿದೆ.

ಮಗುವಿನ ಹಿತಾಸಕ್ತಿಯನ್ನು ಪರಿಗಣಿಸದೆ ಕೌಟುಂಬಿಕ ನ್ಯಾಯಾಲಯವು ಇಂತಹ ಆದೇಶ ನೀಡಿರುವುದು ಸಮಂಜಸವಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ಡಿಎನ್‌ಎ ಪರೀಕ್ಷೆಗೆ ಒಪ್ಪಿಕೊಳ್ಳುವ ಅಥವಾ ನಿರಾಕರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿಲ್ಲದಿದ್ದಾಗ, ವಿಶೇಷವಾಗಿ ಅಪ್ರಾಪ್ತ ವಯಸ್ಸಿನ ಮಗುವನ್ನು ರಕ್ತ ಪರೀಕ್ಷೆಗೆ ಒಳಪಡಿಸುವಂತೆ ಒತ್ತಾಯಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಜೋಶಿ ತಿಳಿಸಿದ್ದಾರೆ.

2020ರ ಫೆಬ್ರುವರಿಯಲ್ಲಿ ಕೌಟುಂಬಿಕ ನ್ಯಾಯಾಲಯವು ಪಿತೃತ್ವವನ್ನು ನಿರ್ಧರಿಸಲು ಮಗುವಿಗೆ ಡಿಎನ್‌ಎ ಪರೀಕ್ಷೆ ನಡೆಸಲು ನಿರ್ದೇಶಿಸಿದ್ದ ಆದೇಶವನ್ನು ಪ್ರಶ್ನಿಸಿ, ವ್ಯಕ್ತಿಯೊಬ್ಬರ ಪರಿತ್ಯಕ್ತ ಪತ್ನಿ ಮತ್ತು ಆಕೆಯ 12 ವರ್ಷದ ಮಗ ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದರು.

ಅರ್ಜಿಯ ಪ್ರಕಾರ 2011ರಲ್ಲಿ ವಿವಾಹವಾಗಿದ್ದ ದಂಪತಿಯು 2013ರ ಜನವರಿಯಲ್ಲಿ ಬೇರೆಯಾಗಲು ನಿರ್ಧರಿಸಿದ್ದರು. ಆಗ ಮಹಿಳೆ ಮೂರು ತಿಂಗಳ ಗರ್ಭಿಣಿಯಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries