HEALTH TIPS

ISRO : 'ನಿಸಾರ್' ಉಡಾವಣೆಗೆ ಸಜ್ಜಾದ ಇಸ್ರೋ, ಬಾಹ್ಯಾಕಾಶದಿಂದ 24×7 ನಿಗಾ ಇಡಲಿದೆ ಭಾರತ

ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆಯ (NASA) ಸಹಯೋಗದಲ್ಲಿ ನಿರ್ಮಿಸಲಾದ ಮೊದಲ ಉಪಗ್ರಹವಾದ (satellite) ನಾಸಾ - ಇಸ್ರೋ ಸಿಂಥೆಟಿಕ್ ಅಪರೆರ್ಚರ್ ರೇಡಾರ್ ಉಪಗ್ರಹ ಸಿಂಪಲ್ಲಾಗ್ ಹೇಳೋದಾದ್ರೆ ನಿಸಾರ್ (NASA-ISRO Synthetic Aperture Radar) ಉಡಾವಣೆಗೆ ಸಿದ್ಧವಾಗಿದೆ.

ಇದೇ ತಿಂಗಳ 30ರಂದು ಸಂಜೆ 5:40ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋದ 'ಜಿಎಸ್​ಎಲ್​ವಿ - ಎಫ್ 16' ರಾಕೆಟ್ ಮೂಲಕ ನಿಸಾರ್ ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತದೆ.

ನಿಸಾರ್ ವಿಶೇಷತೆಗಳು

2392 ಕೆ.ಜಿ ತೂಕದ ನಿಸಾರ್, ವಿಶಿಷ್ಟ ಭೂ ವೀಕ್ಷಣಾ ಉಪಗ್ರಹವಾಗಿದೆ. ಇದು ಭೂಮಿಯನ್ನು ಎರಡು ಆವರ್ತನದ ಸಿಂಥೆಟಿಕ್ ಅಪರ್ಚರ್ ರಾಡಾರ್ ಅಂದರೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆಯ ಎಲ್-ಬ್ಯಾಂಡ್ ಮತ್ತು ಇಸ್ರೋದ ಎಸ್-ಬ್ಯಾಂಡ್ ಮೂಲಕ ವೀಕ್ಷಿಸುವ ಮೊದಲ ಉಪಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಎರಡೂ ಬ್ಯಾಂಡ್‌ಗಳು ನಾಸಾದ 12 ಮೀಟರ್ ಆಂಟೆನಾವನ್ನು ಬಳಸುತ್ತಿದ್ದು, ಇದನ್ನು ಇಸ್ರೋದ I3K ಉಪಗ್ರಹಕ್ಕೆ ಅಳವಡಿಸಲಾಗಿದೆ. ನಿಸಾರ್ ಉಪಗ್ರಹವು SweepSAR ಎಂಬ ತಂತ್ರಜ್ಞಾನವನ್ನು ಮೊದಲ ಬಾರಿಗೆ ಬಳಸಿಕೊಂಡು 242 ಕಿಲೋ ಮೀಟರ್ ವಿಸ್ತಾರದ ವ್ಯಾಪ್ತಿಯಲ್ಲಿ ಭೂಮಿಯ ಮೇಲೆ ಕಣ್ಣಿಡಲಿದೆ.

ನಿಸಾರ್ ಉಪಯೋಗಗಳು

ನಿಸಾರ್ ಉಪಗ್ರಹವು ಇಡೀ ಭೂಗೋಳವನ್ನು ಸ್ಕ್ಯಾನ್ ಮಾಡುವಂಥ ಶಕ್ತಿ ಹೊಂದಿದೆ. ಎಲ್ಲಾ ಹವಾಮಾನದಲ್ಲೂ, ಹಗಲು ರಾತ್ರಿ ಭೂಗೋಳವನ್ನು ಸುತ್ತಿ ತಾನು ಸಂಗ್ರಹಿಸಿರುವ ಮಾಹಿತಿಯನ್ನು ಪ್ರತಿ 12 ದಿನಗಳಿಗೊಮ್ಮೆ ಕಳಿಸುತ್ತದೆ. ಈ ಉಪಗ್ರಹದಿಂದ ಸಿಗುವ ದತ್ತಾಂಶವು ಅನೇಕ ಕೆಲಸಗಳಿಗೆ ಬಳಕೆಯಾಗಲಿದೆ.

ನಿಸಾರ್ ಉಪಗ್ರಹವು ಭೂಮಿಯ ಮೇಲ್ಮೈಯಲ್ಲಿನ ಸಣ್ಣ ಬದಲಾವಣೆಗಳನ್ನೂ ಪತ್ತೆಹಚ್ಚಬಲ್ಲದು. ಉದಾಹರಣೆಗೆ ನೆಲದ ವಿರೂಪ, ಮಂಜುಗಡ್ಡೆಯ ಚಲನೆ ಮತ್ತು ಕಾಡುಗಳಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಮಾಹಿತಿ ಕಳಿಸುತ್ತದೆ.

ಸಾಗರದ ಮೇಲೆ ಏಳುವ ಚಂಡಮಾರುತಗಳ ಬಗ್ಗೆ ನಕ್ಷೆಗಳನ್ನು ತಯಾರಿಸಿ ನಿಸಾರ್ ಕಳುಹಿಸುತ್ತದೆ. ಇಂಥ ಅಮೂಲ್ಯ ಮಾಹಿತಿಗಳಿಂದಾಗಿ ಭಾರತಕ್ಕೆ ದೊಡ್ಡ ಮಟ್ಟದ ಲಾಭವಾಗುತ್ತದೆ. ಅಂಟಾರ್ಟಿಕಾಗಳಲ್ಲಿ ಸಮುದ್ರದ ಮಂಜುಗಡ್ಡೆಯ ಬದಲಾವಣೆ, ಸಮುದ್ರಗಳ ಮೇಲೆ ಹಡಗುಗಳ ಚಲನವಲನ, ಕರಾವಳಿ ಪ್ರದೇಶದ ಮೇಲೆ ನಿಗಾ, ಚಂಡಮಾರುತಗಳು, ಮಣ್ಣಿನ ತೇವಾಂಶದಲ್ಲಿನ ಬದಲಾವಣೆ ಬಗ್ಗೆ ಮಾಹಿತಿ ನೀಡುತ್ತದೆ.

'2035ರ ಹೊತ್ತಿಗೆ ನಮ್ಮದೇ ಬಾಹ್ಯಾಕಾಶ ನಿಲ್ದಾಣ'

ಕರ್ನೂಲ್‌: ನಮ್ಮ ದೇಶ (Country) 2047ರ ವೇಳೆಗೆ ವಿಜ್ಞಾನ (Science) ಮತ್ತು ತಂತ್ರಜ್ಞಾನ (Technology) ಕ್ಷೇತ್ರದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಸಾಧಿಸುತ್ತದೆ ಮತ್ತು ವಿಶ್ವದ ಅಗ್ರಸ್ಥಾನದಲ್ಲಿ ಇರಲಿದೆ ಎಂದು ಇಸ್ರೋ (ISRO) ಅಧ್ಯಕ್ಷ ನಾರಾಯಣನ್ (Narayanan) ಹೇಳಿದ್ದಾರೆ.

104 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ
ಆಂಧ್ರಪ್ರದೇಶದ ಕರ್ನೂಲ್‌ನಲ್ಲಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ವಿನ್ಯಾಸ ಮತ್ತು ಉತ್ಪಾದನಾ ಸಂಸ್ಥೆಯ 7 ನೇ ಘಟಿಕೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ​ ಭಾಗವಹಿಸಿದ್ದ ಅವರು ನಮ್ಮ ದೇಶ ಸ್ವಾತಂತ್ರ್ಯದ ನಂತರ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಆಗಿದೆ. ಅನೇಕ ಕೆಲಸಗಳಲ್ಲಿ ಯಶಸ್ಸನ್ನ ಸಹ ಸಾಧಿಸಿದೆ. ಭಾರತ ಎಲ್ಲಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ನಾವು ಈಗಾಗಲೇ ಸುಮಾರು 104 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ್ದು, ಮಾಹಿತಿ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಇನ್ನು ನಮ್ಮ ದೇಶ ಈಗಾಗಲೇ ಬೇರೆ ಬೇರೆ ದೇಶಗಳಿಗೆ ಆಹಾರ ಧಾನ್ಯಗಳನ್ನು ರಫ್ತು ಮಾಡುತ್ತಿದೆ. ಅನೇಕ ಕ್ಷೇತ್ರದಲ್ಲಿ ವಿವಿಧ ರೀತಿಯ ಬದಲಾವಣೆಗಳಾಗಿದೆ. ಮುಖ್ಯವಾಗಿ ವೈದ್ಯಕೀಯ ಕ್ಷೇತ್ರದಲ್ಲೂ ಹಲವು ಬದಲಾವಣೆಗಳು ಹಾಗೂ ಅಭಿವೃದ್ಧಿಗಳು ಆಗಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಬದಲಾವಣೆಗಳನ್ನ ಬಳಸಿಕೊಂಡು ಗ್ರಾಮೀಣ ಪ್ರದೇಶಗಳನ್ನ ಅಭಿವೃದ್ಧಿ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries