HEALTH TIPS

ಶುಭಾಂಶು ಶುಕ್ಲಾ ಕರೆ: ISSಗೆ ಸುರಕ್ಷಿತ ಪ್ರಯಾಣದಲ್ಲಿ ISRO ಪಾತ್ರ ಶ್ಲಾಘನೆ

ಬೆಂಗಳೂರು: ಆಕ್ಸಿಯಂ-4 ಕಾರ್ಯಾಚರಣೆಯ ಭಾಗವಾಗಿ ಪ್ರಸ್ತುತ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ(ಐಎಸ್‌ಎಸ್) ಭಾರತೀಯ ಗಗನಯಾನಿ ಶುಭಾಂಶು ಶುಕ್ಲಾ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ವಿ. ನಾರಾಯಣನ್ ಅವರಿಗೆ ಕರೆ ಮಾಡಿ ಐಎಸ್‌ಎಸ್‌ಗೆ ಸುರಕ್ಷಿತ ಪ್ರಯಾಣವನ್ನು ಖಾತ್ರಿಪಡಿಸುವಲ್ಲಿ ಇಸ್ರೊ ತಂಡದ ಪಾತ್ರವನ್ನು ಶ್ಲಾಘಿಸಿದ್ದಾರೆ.

ಜುಲೈ 6 ರಂದು ಮಧ್ಯಾಹ್ನ ಶುಕ್ಲಾ ಕರೆ ಮಾಡಿದ್ದರು ಎಂದು ಇಸ್ರೊ ತಿಳಿಸಿದೆ. ಕರೆಯ ಸಮಯದಲ್ಲಿ ಇಸ್ರೊ ಅಧ್ಯಕ್ಷರು. ಶುಕ್ಲಾ ಅವರ ಯೋಗಕ್ಷೇಮದ ಬಗ್ಗೆ ತಮ್ಮ ತೀವ್ರ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಐಎಸ್‌ಎಸ್‌ನಲ್ಲಿ ನಡೆಸಲಾಗುತ್ತಿರುವ ವಿವಿಧ ವೈಜ್ಞಾನಿಕ ಪ್ರಯೋಗಗಳು ಮತ್ತು ಚಟುವಟಿಕೆಗಳ ಬಗ್ಗೆ ವಿಚಾರಿಸಿದ್ದಾರೆ.

ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯೂ ಆಗಿರುವ ನಾರಾಯಣನ್, ಶುಕ್ಲಾ ಅವರು ಭೂಮಿಗೆ ಹಿಂದಿರುಗಿದ ನಂತರ ಎಲ್ಲಾ ಪ್ರಯೋಗಗಳು ಮತ್ತು ಚಟುವಟಿಕೆಗಳನ್ನು ಸೂಕ್ಷ್ಮವಾಗಿ ದಾಖಲಿಸುವ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಏಕೆಂದರೆ ಇದು ಭಾರತದ ಮಾನವ ಸಹಿತ ಬಾಹ್ಯಾಕಾಶ ಕಾರ್ಯಕ್ರಮವಾದ ಗಗನಯಾನ ಯೋಜನೆಯ ಅಭಿವೃದ್ಧಿಗೆ ಅಗತ್ಯ ಇನ್‌ಪುಟ್‌ಗಳನ್ನು ಒದಗಿಸುತ್ತದೆ.

ಇಸ್ರೊ ಪ್ರಕಾರ, ಗಗನಯಾನ ಕಾರ್ಯಕ್ರಮವು ಮಾನವ ಸಹಿತ ಬಾಹ್ಯಾಕಾಶ ನೌಕೆಯನ್ನು ಭೂಮಿಯ ಕೆಳ ಕಕ್ಷೆಗೆ ಉಡಾಯಿಸುವ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಾಚರಣೆಯಿಂದ ಪಡೆದ ಅನುಭವಗಳು ಮತ್ತು ಜ್ಞಾನವು ಅದರ ಯಶಸ್ಸಿಗೆ ನಿರ್ಣಾಯಕವಾಗಿರುತ್ತದೆ ಎಂದು ಇಸ್ರೊ ತಿಳಿಸಿದೆ.

ಶುಭಾಂಶು ಶುಕ್ಲಾ ಅವರ ಐಎಸ್‌ಎಸ್ ಕಾರ್ಯಾಚರಣೆಯನ್ನು ಇಸ್ರೊ-ಆಕ್ಸಿಯಂ ಸ್ಪೇಸ್ ಫ್ಲೈಟ್ ಒಪ್ಪಂದದಡಿಯಲ್ಲಿ ಕಾರ್ಯಗತಗೊಳಿಸಲಾಗಿದೆ. ಈ ಚರ್ಚೆಯಲ್ಲಿ ವಿಕ್ರಮ್ ಸಾರಾಭಾಯ್ ಸ್ಪೇಸ್ ಸೆಂಟರ್ (ವಿಎಸ್‌ಎಸ್‌ಸಿ) ನಿರ್ದೇಶಕ ಮತ್ತು ಮಾನವ ಬಾಹ್ಯಾಕಾಶ ಕಾರ್ಯಕ್ರಮದ ಪ್ರೋಗ್ರಾಂ ನಿರ್ವಹಣಾ ಮಂಡಳಿಯ ಅಧ್ಯಕ್ಷ ಡಾ. ಉನ್ನಿಕೃಷ್ಣನ್ ನಾಯರ್; ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ (ಎಲ್‌ಪಿಎಸ್‌ಸಿ) ನಿರ್ದೇಶಕ ಎಂ. ಮೋಹನ್, ಇಸ್ರೊ ಇನರ್ಶಿಯಲ್ ಸಿಸ್ಟಮ್ಸ್ ಯೂನಿಟ್ (ಐಐಎಸ್‌ಯು) ನಿರ್ದೇಶಕ ಪದ್ಮಕುಮಾರ್ ಇ.ಎಸ್; ಇಸ್ರೊನ ವೈಜ್ಞಾನಿಕ ಕಾರ್ಯದರ್ಶಿ ಎಂ. ಗಣೇಶ್ ಪಿಳ್ಳೈ; ಮತ್ತು ಎಲ್‌ಪಿಎಸ್‌ಸಿಯ ಮಾಜಿ ನಿರ್ದೇಶಕ ಎನ್. ವೇದಾಚಲಂ ಸೇರಿದಂತೆ ಇಸ್ರೊದ ಹಲವಾರು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಬಾಹ್ಯಾಕಾಶ ನಿಲ್ದಾಣದಲ್ಲಿ ನಡೆಸಲಾಗುತ್ತಿರುವ ಪ್ರಯೋಗಗಳು ಮತ್ತು ಚಟುವಟಿಕೆಗಳ ಪ್ರಗತಿಯ ಕುರಿತು ಶುಕ್ಲಾ ಅವರು ಮಾಹಿತಿ ಹಂಚಿಕೊಂಡರು. ವೈಜ್ಞಾನಿಕ ಉದ್ದೇಶಗಳು ಮತ್ತು ಎದುರಿಸುತ್ತಿರುವ ಸವಾಲುಗಳನ್ನು ವಿವರಿಸಿದರು ಎಂದು ಇಸ್ರೊ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries