HEALTH TIPS

Kap's Cafe: Canadaದಲ್ಲಿ Kapil Sharma ಕೆಫೆ ಮೇಲೆ ಗುಂಡಿನ ದಾಳಿ; 'ಧೃತಿಗೆಡಲ್ಲ, ಮುಚ್ಚುವುದೂ ಇಲ್ಲ' ಎಂದ ಹಾಸ್ಯ ನಟ, 'ಲಡ್ಡಿ' ಕೈವಾಡ!

ಮುಂಬೈ: ಕೆನಡಾದಲ್ಲಿ ಭಾರತ ಮೂಲದ ಖ್ಯಾತ ಹಾಸ್ಯನಟ ಕಪಿಲ್ ಶರ್ಮಾ ನೂತನವಾಗಿ ತೆರೆದಿರುವ Kap's Cafe ಕೆಫೆ ಮೇಲೆ ಖಲಿಸ್ತಾನಿ ಉಗ್ರರು ಗುಂಡಿನ ದಾಳಿ ನಡೆಸಿದ್ದು ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಹೌದು.. ಬಾಲಿವುಡ್ ಕಿರುತೆರೆ ಕಾಮಿಡಿ ಕಿಂಗ್ ಕಪಿಲ್ ಶರ್ಮಾ ಅವರ ಕೆನಡಾದ ಕ್ಯಾಪ್ಸ್ ಕೆಫೆಯಲ್ಲಿ ಗುರುವಾರ ಗುಂಡಿನ ದಾಳಿ ನಡೆದಿದ್ದು, ಕಪಿಲ್ ಶರ್ಮಾ ಕೆಫೆ ಮೇಲೆ ಖಾಲಿಸ್ತಾನ್ ಉಗ್ರರು ದಾಳಿ ನಡೆಸಿ 9 ಸುತ್ತು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.

ಉಗ್ರರ ಗುಂಡಿನ ದಾಳಿ ವಿಡಿಯೋ ವೈರಲ್

ಕಪಿಲ್ ಶರ್ಮಾ ಹಾಗೂ ಪತ್ನಿ ಗಿನ್ನಿ ಚಾತ್ರಾತ್ ಜೊತೆಯಾಗಿ ಈ ಕೆಫೆ ಆರಂಭಿಸಿದ್ದರು. ಆದರೆ ಆರಂಭಗೊಂಡ ಕೆಲವೇ ದಿನದಲ್ಲಿ ಖಲಿಸ್ತಾನಿ ಉಗ್ರರು ಕ್ಯಾಪ್ಸ್ ಕೆಫೆ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ನಿಷೇಧಿತ ಖಲಿಸ್ತಾನಿ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ ಎಂದು ಹೇಳಲಾಗುತ್ತಿದೆ. ಗುಂಡಿನ ದಾಳಿ ನಡೆಸುತ್ತಿರುವ ದೃಶ್ಯ ಬಹಿರಂಗವಾಗಿದೆ.

ಭಾನುವಾರ ರಾತ್ರಿ ನಿಷೇಧಿತ ಖಲಿಸ್ತಾನಿ ಉಗ್ರ ಸಂಘಟನೆಯ ಅಂಗ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ (BKI ) ಗ್ಯಾಂಗ್ ಈ ದಾಳಿ ನಡೆಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾದ ಅಂಶಗಳನ್ನು ಮೂಲಗಳು ಹೇಳುತ್ತಿದೆ.

ಜೀವಹಾನಿ ಇಲ್ಲ

ನಿಷೇಧಿತ ಉಗ್ರ ಸಂಘಟನೆಯ ಉಗ್ರರು ತಡ ರಾತ್ರಿ ಕ್ಯಾಪ್ಸ್ ಕೆಫೆಯಿಂದ ಕೆಲವೇ ದೂರದಲ್ಲಿ ನಿಂತು ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯ ದೃಶ್ಯಗಳು ಬಹಿರಂಗವಾಗಿದೆ. ತಡ ರಾತ್ರಿಯಾದ ಕಾರಣ ಕ್ಯಾಪ್ಸ್ ಕೆಫೆ ಕ್ಲೋಸ್ ಆಗಿತ್ತು. ಹೀಗಾಗಿ ಅದೃಷ್ಠವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಆದರೆ ರೆಸ್ಟೋರೆಂಟ್ ಸಂಪೂರ್ಣ ಹಾನಿಯಾಗಿದೆ.

ಹಾಸ್ಯನಟ ಹೇಳಿದ್ದೇನು?

ಇನ್ನ ಈ ಕೃತ್ಯದ ಕುರಿತು ನಟಿ ಕಪಿಲ್ ಶರ್ಮಾ ಮೊದಲ ಪ್ರತಿಕ್ರಿಯೆ ನೀಡಿದ್ದು, 'ಕ್ಯಾಪ್ಸ್ ಕೆಫೆಯಲ್ಲಿ ರುಚಿಕರವಾದ ಕಾಫಿ ಜೊತೆಗೆ ಎಲ್ಲರನ್ನೂ ಒಟ್ಟಿಗೆ ಸೇರಿಸಿ ಸಂತೋಷ ಪಡುವ ಉದ್ದೇಶದಿಂದ ತೆರೆದಿದ್ದೆ. ಘಟನೆಯಿಂದ ನಾನು ಶಾಕ್ ಆಗಿದ್ದೇನೆ. ಆದರೆ, ಧೃತಿಗೆಡದೆ ಮುಂದುವರಿಯುತ್ತೇನೆ. ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದಗಳು. ನಿಮ್ಮ ವಿಶ್ವಾಸದಿಂದಲೇ ಕ್ಯಾಪ್ಸ್ ಕೆಫೆ ನಿಂತಿದೆ. ಹಿಂಸೆ ವಿರುದ್ಧ ದೃಢವಾಗಿ ನಿಂತು ಕ್ಯಾಪ್ಸ್ ಕೆಫೆಯನ್ನು ಮತ್ತೆ ನಿಲ್ಲಿಸೋಣ ಎಂದು ಕಪಿಲ್ ಶರ್ಮಾ ಹೇಳಿದ್ದಾರೆ.

ದಾಳಿ ಹಿಂದೆ ಲಡ್ಡಿ ಕೈವಾಡ

ಕೆನಾಡ ತನಿಖಾ ಎಜೆನ್ಸಿಗಳು ಈ ದಾಳಿ ತನಿಖೆ ನಡೆಸುತ್ತಿದೆ. ಜರ್ಮನಿ ಮೂಲದ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ ಆಪರೇಟಿವ್ ಹರ್ಜಿತ್ ಸಿಂಗ್ ಅಲಿಯಾಸ್ ಲಡ್ಡಿ ಈ ದಾಳಿ ನಡೆಸಿರುವ ಸಾಧ್ಯತೆಯನ್ನು ಕೆನಾಡ ತನಿಖಾ ಎಜೆನ್ಸಿ ಅನುಮಾನ ವ್ಯಕ್ತಪಡಿಸಿದೆ. ಲಡ್ಡಿ ಭಾರತದ ಮೋಸ್ಟ್ ವಾಟೆಂಟ್ ಉಗ್ರನಾಗಿದ್ದಾನೆ.

ಭಾರತದಲ್ಲಿ ಹಲವು ಭಯೋತ್ಪಾದಕ ಕೃತ್ಯಗಳು, ಹಿಂದೂ ನಾಯಕ ಹತ್ಯೆ ಹಿಂದೆ ಈತನ ಮೇಲೆ ಗಂಭೀರ ಆರೋಪಗಳು ಕೇಳಿಬಂದಿದೆ. ಎಪ್ರಿಲ್ 13, 2024ರಲ್ಲಿ ವಿಶ್ವ ಹಿಂದೂಪರಿಷತ್ ಪ್ರಭಾಕರ್ ಮೇಲೆ ಪಂಜಾಬ್‌ನ ನಂಗಾಲ್‌ನಲ್ಲಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಈ ದಾಳಿ ಹಿಂದೆ ಇದೆ ಲಡ್ಡಿ ಮಾಸ್ಟರ್ ಮೈಂಡ್ ಆಗಿ ಕಾರ್ಯನಿರ್ವಹಿಸಿದ್ದ ಅನ್ನೋದು ತನಿಖೆಯಲ್ಲಿ ಬಹಿರಂಗವಾಗಿದೆ.

2023ರಲ್ಲಿ ಲಡ್ಡಿ ಕುರಿತು ಮಾಹಿತಿ ನೀಡಿದರೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಎನ್‌ಐಎ ಘೋಷಿಸಿತ್ತು. ಶಿವಸೇನಾ ನಾಯಕರ ಮನೆ ಮೇಲೆ ಪೆಟ್ರೋಲ್ ಬಾಂಬ್ ಹಾಕಿದ ಪ್ರಕರಣದಲ್ಲಿ ಇದೇ ಲಡ್ಡಿ ಸಹಚರು ಲೂಧಿಯಾನ ಜೈಲಿನಲ್ಲಿದ್ದಾರೆ.

ಕ್ಯಾಪ್ಸ್ ಕೆಫೆ ವಿಶೇಷತೆ

ಕೆನಡಾದಲ್ಲಿರುವ ಭಾರತೀಯರಿಗಾಗಿ ಪ್ರಮುಖವಾಗಿ ಪಂಜಾಬಿ ಮೂಲದವರಿಗಾಗಿ ಕಪಿಲ್ ಶರ್ಮಾ ಕೆನಡಾ, ಸರ್ರೆ, ಬ್ರಿಟನ್, ಕೊಲಂಬಿಯಾದಲ್ಲಿ ಕ್ಯಾಪ್ಸ್ ಕೆಫೆ ಆರಂಭಿಸಿದ್ದರು. ಕಪಿಲ್ ಶರ್ಮಾ ಕ್ಯಾಪ್ಸ್ ಕಫೆಗೆ ಆರಂಭದಲ್ಲೇ ಭರ್ಜರಿ ಯಶಸ್ಸು ಕಂಡಿತ್ತು. ಹಲವು ಖಾದ್ಯಗಳು, ವಿಶೇಷವಾಗಿ ಪಂಜಾಬಿ ಖಾದ್ಯಗಳು ಈ ಕೆಫೆಯಲ್ಲಿ ಲಭ್ಯವಿದೆ. ಇಲ್ಲಿ ತಿಂಡಿ-ತಿನಿಸುಗಳ ಬೆಲೆ 500 ರೂ.ಗಳಿಂದ ಶುರುವಾಗುತ್ತದೆ. ಕಾಫಿ, ಸ್ವೀಟ್ಸ್, ಕೇಕ್, ಸೇರಿದಂತೆ ಹಲವು ವಿಶೇಷ ಖಾದ್ಯಗಳು ಈ ಕೆಫೆಯಲ್ಲಿದೆ. ಕೆಫೆ ಆರಂಭಗೊಂಡ ಕ್ಷಣದಿಂದಲೂ ಭಾರಿ ಗ್ರಾಹಕರನ್ನು ಸೆಳೆಯುತ್ತಿದೆ. ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎನ್ನವಾಗಲೇ ಈ ಗುಂಡಿನ ದಾಳಿ ನಡೆದಿದೆ.

ಕಪಿಲ್ ಶರ್ಮಾ ಸದ್ಯ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋ 3ನೇ ಆವೃತ್ತಿ ಲಾಂಚ್ ಮಾಡಲು ಮುಂದಾಗಿದ್ದಾರೆ. ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ಶೋ ಭರ್ಜರಿ ಕಮ್‌ಬ್ಯಾಕ್‌ಗೆ ಸಿದ್ಧತೆ ನಡೆಯುತ್ತಿದೆ. ಕಾಮಿಡಿ ಶೋ ಮೂಲಕ ಭಾರಿ ಜನಪ್ರಿಯತೆ ಪಡೆದಿರುವ ಕಪಿಲ್ ಈಗಾಗಲೇ ಬಾಲಿವುಡ್ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಇದೀಗ ಮತ್ತೆರೆಡು ಸಿನಿಮಾದಲ್ಲಿ ಕಪಿಲ್ ಶರ್ಮಾ ಕಾಣಿಸಿಕೊಳ್ಳುತ್ತಿದ್ದಾರೆ. ಕಿಸ್ ಕಿಸ್ಕೋ ಪ್ಯಾರ್ ಕರೂನ್, ದಾದಿ ಕಿ ಶಾದಿ ಎರಡು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries