ತಿರುವನಂತಪುರ: ಸೆಪ್ಟೆಂಬರ್ 3ರಿಂದ 7 ದಿನ ಅಧಿಕೃತವಾಗಿ ಓಣಂ ಆಚರಣೆ ಮಾಡಲಾಗುವುದು ಎಂದು ಕೇರಳ ಸರ್ಕಾರ ಶನಿವಾರ ತಿಳಿಸಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಒಂದು ವಾರ ಓಣಂ ಆಚರಿಸುವ ಬಗ್ಗೆ ತೀರ್ಮಾನಿಸಲಾಯಿತು. ರಾಜಧಾನಿ ತಿರುವನಂತಪುರದಲ್ಲಿ ಭವ್ಯ ಸಾಂಸ್ಕೃತಿಕ ಮೆರವಣಿಗೆಯೊಂದಿಗೆ ಉತ್ಸವ ಮುಕ್ತಾಯಗೊಳ್ಳಿದೆ ಎಂದು ಮುಖ್ಯಮಂತ್ರಿ ಕಚೇರಿಯ ತಿಳಿಸಿದೆ.
ಜಿಲ್ಲಾ ಪ್ರವಾಸೋದ್ಯಮ ಪ್ರಚಾರ ಮಂಡಳಿ (ಡಿಟಿಪಿಸಿ) ಆಶ್ರಯದಲ್ಲಿ ಆಚರಣೆಗಳನ್ನು ಆಯೋಜಿಸಲಾಗುವುದು. ಕಾರ್ಯಕ್ರಮ ಯಶಸ್ವಿಯಾಗಿ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡುವಂತೆ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ.
ತಿರುವನಂತಪುರದ ಕೌಡಿಯಾರ್‌ನಿಂದ ಮಣಕಾಡ್‌ವರೆಗಿನ ಪ್ರದೇಶವನ್ನು ಉತ್ಸವ ವಲಯವೆಂದು ಘೋಷಿಸಲಾಗುವುದು. ರಾಜಧಾನಿಗೆ ದೀಪಾಲಂಕಾರ ಮಾಡಲಾಗುತ್ತದೆ.ಎಲ್ಲಾ ಕಾರ್ಯಕ್ರಮಗಳು ರಾಜ್ಯದ ಹಸಿರು ಶಿಷ್ಟಾಚಾರಕ್ಕೆ ಬದ್ಧವಾಗಿರುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಗತ್ಯ ಸಾಮಗ್ರಿಗಳನ್ನು ಒಳಗೊಂಡಿರುವ 'ಓಣಂ ಕಿಟ್‌ಗಳನ್ನು' ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ವಿತರಿಸಲು ಸಹ ನಿರ್ಧರಿಸಲಾಗಿದೆ.




