ಕೊಚ್ಚಿ: ವಿದ್ಯಾರ್ಥಿಗಳಲ್ಲಿ ಎಚ್.1 ಎನ್.1 ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಎರ್ನಾಕುಳಂನಲ್ಲಿರುವ ಕುಸಾಟ್(COCHIN UNIVERSITY OF SCIENCE AND TECHNOLOGY) ಕ್ಯಾಂಪಸ್ ಅನ್ನು ಮುಚ್ಚಲಾಗಿದೆ. ಆಗಸ್ಟ್ 5 ರವರೆಗೆ ಐದು ದಿನಗಳವರೆಗೆ ಕ್ಯಾಂಪಸ್ ಮುಚ್ಚಲಾಗುತ್ತದೆ.
ಶುಕ್ರವಾರದಿಂದ ತರಗತಿಗಳು ಆನ್‍ಲೈನ್‍ನಲ್ಲಿರುತ್ತವೆ. ಕುಸಾಟ್ ನಲ್ಲಿರುವ 15 ಹಾಸ್ಟೆಲ್‍ಗಳಲ್ಲಿ ಎರಡರಲ್ಲಿ ವಿದ್ಯಾರ್ಥಿಗಳು ರೋಗಲಕ್ಷಣಗಳನ್ನು ತೋರಿಸಿದ್ದಾರೆ.
ಹತ್ತು ವಿದ್ಯಾರ್ಥಿಗಳು ಈಗಾಗಲೇ ಚಿಕಿತ್ಸೆ ಪಡೆದಿದ್ದಾರೆ. ಕೇರಳದ ಹೊರಗಿನ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್ ಕೊಠಡಿಗಳನ್ನು ಖಾಲಿ ಮಾಡುವಂತೆ ಕೇಳಿಕೊಳ್ಳಲಾಗಿದೆ.




