HEALTH TIPS

ಪ್ರಜಾಪ್ರಭುತ್ವವನ್ನೇ ನಾಶಮಾಡಲಿದೆ ಸಂವಿಧಾನದ 130ನೇ ತಿದ್ದುಪಡಿ ಮಸೂದೆ: ಮಮತಾ

ಕೋಲ್ಕತ್ತ: ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಸಂವಿಧಾನ (130ನೇ ತಿದ್ದುಪಡಿ) ಮಸೂದೆ-2025 ವಿರುದ್ಧ ಪಶ್ಚಿಮ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ. ತುರ್ತುಪರಿಸ್ಥಿತಿಗಿಂತಲೂ ಕಠಿಣವಾದ ಈ ಕ್ರಮವು ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಯುಗಾಂತ್ಯಕ್ಕೆ ಕಾರಣವಾಗಲಿದೆ ಎಂದು ಆರೋಪಿಸಿದ್ದಾರೆ.

ಗಂಭೀರ ಆರೋಪಗಳನ್ನು ಎದುರಿಸಿ ಸತತ 30 ದಿನಗಳ ವರೆಗೆ ಬಂಧನಕ್ಕೊಳಗಾಗುವ ಅಥವಾ ಕನಿಷ್ಠ ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗುವ ಪ್ರಧಾನಿ, ಮುಖ್ಯಮಂತ್ರಿ, ಕೇಂದ್ರ ಹಾಗೂ ರಾಜ್ಯಗಳ ಸಚಿವರನ್ನು ಹುದ್ದೆಯಿಂದ ಪದಚ್ಯುತಗೊಳಿಸಲು ಅವಕಾಶ ಕಲ್ಪಿಸುವ ಮೂರು ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಇಂದು (ಬುಧವಾರ) ಲೋಕಸಭೆಯಲ್ಲಿ ಮಂಡಿಸುವುದಾಗಿ ಕೇಂದ್ರ ತಿಳಿಸಿತ್ತು.

ಈ ಕುರಿತು ಮಮತಾ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌/ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಕೇಂದ್ರ ಸರ್ಕಾರ ಮಂಡಿಸಲು ಉದ್ದೇಶಿಸಿರುವ ಸಂವಿಧಾನ (130ನೇ ತಿದ್ದುಪಡಿ) ಮಸೂದೆ-2025 ಅನ್ನು ಖಂಡಿಸುತ್ತೇನೆ. ಇದು ತುರ್ತುಪರಿಸ್ಥಿತಿಗಿಂತಲೂ ಕಠಿಣವಾದ ಕ್ರಮವಾಗಿದ್ದು, ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಶಾಶ್ವತವಾಗಿ ನಾಶಮಾಡುವ ಹೆಜ್ಜೆಯಾಗಲಿದೆ. ಇದು ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಗೆ ಮರಣ ಮೃದಂಗವಾಗಲಿದೆ' ಎಂದು ಪ್ರತಿಪಾದಿಸಿದ್ದಾರೆ.

'ಒಬ್ಬ ವ್ಯಕ್ತಿ - ಒಂದು ಪಕ್ಷ - ಒಂದು ಸರ್ಕಾರ' ವ್ಯಸ್ಥೆಯನ್ನು ಸಂಘಟಿಸುವುದೇ ಈ ತಿದ್ದುಪಡಿಯ ಉದ್ದೇಶ. ಇದು ಸಂವಿಧಾನದ ಮೂಲ ರಚನೆಯನ್ನು ನಾಶ ಮಾಡಲಿದೆ ಎಂದೂ ಆರೋಪಿಸಿದ್ದಾರೆ.

ಹಾಗೆಯೇ, 'ಏನೇ ಆಗಲಿ, ಪ್ರಜಾಪ್ರಭುತ್ವನ್ನು ರಕ್ಷಿಸುವ ಸಲುವಾಗಿ ಈ ಮಸೂದೆ ಜಾರಿಯಾಗದಂತೆ ತಡೆಯಬೇಕು' ಎಂದು ಕರೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries