ಮಂಜೇಶ್ವರ: ಮೀಯಪದವು ಮಾಸ್ಟರ್ಸ್ ಆಟ್ರ್ಸ್-ಸ್ಪೋಟ್ರ್ಸ್ ಕ್ಲಬ್ ನ 14ನೇ ವಾರ್ಷಿಕೋತ್ಸವ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಸಮಾರೋಪ ಸಮಾರಂಭ ಕಾರ್ಯಕ್ರಮ ಮೀಯಪದವು ವಿದ್ಯಾವರ್ಧಕ ಶಾಲೆಯ ರಾಮಕೃಷ್ಣ ರಾವ್ ವೇದಿಕೆಯಲ್ಲಿ ಭಾನುವಾರ ಜರಗಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಕೆ.ವಿ ರಾಧಾಕೃಷ್ಣ ಭಟ್ ವಹಿಸಿ ಶುಭ ಹಾರೈಸಿದರು. ಮೀಯಪದವು ವಿ.ಎ.ಯು.ಪಿ. ಶಾಲೆಯ ಆಡಳಿತ ಸಲಹೆಗಾರ ಶ್ರೀಧರ್ ರಾವ್ ಆರ್. ಎಂ, ವಾಗ್ಮಿ ಅಕ್ಷತ ಪ್ರದೀಪ್, ನಿವೃತ್ತ ಅಧ್ಯಾಪಕ ದಾಮೋದರ ಮಾಸ್ತರ್ ಕಬ್ಬಿನಹಿತ್ತಿಲು ಮುಖ್ಯ ಅತಿಥಿಗಳಾಗಿ ಶುಭಾಶಂಸನೆಗೈದರು. ಕ್ಲಬ್ ಅಧ್ಯಕ್ಷ ಕೃಷ್ಣ ಪ್ರಸನ್ನ ಹಾಗೂ ಗೌರವ ಸಲಹೆಗಾರ ಜನಾರ್ಧನ ಎಸ್. ಉಪಸ್ಥಿತರಿದ್ದರು.
ಈ ಸಂದರ್ಭ 024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಶ್ರೇಣಿ ಪಡೆದ ಆದ್ಯ ಎಸ್.ಎನ್, ಗಣೇಶ್ ಶರ್ಮ, ದಿಶಾ ಲಕ್ಷ್ಮಿ ಎಂ.ಬಿ, ಆದ್ಯಾಶ್ರೀ ಎಂ, ಜ್ಯೋತಿಕಾ, ಎಂ. ಸ್ತುತಿ, ಯುಕ್ತಿ ಶೆಟ್ಟಿ, ವಿ. ಮೇಘ, ಶ್ರೀಶ ಕೆ. ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ಜಯಪ್ರದಾ, ಲಿಖಿತಾ ಎಂ.ಎಸ್, ನಂದನಾ ಪಿ.ಎಸ್. ಹಾಗೂ ಐಶ್ವರ್ಯ ಇವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬಳಿಕ ಆಟೋಟ ಸ್ಪರ್ಧೆ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರಘುವೀರ್ ರಾವ್ ಕಾರ್ಯಕ್ರಮ ಉಪಸ್ಥಿತರಿದ್ದರು. ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿ, ಕಿರಣ್ ಕುಮಾರ್ ಚಂಡಿತೋಟ ನಿರೂಪಿಸಿ, ವಂದಿಸಿದರು. ಅಧ್ಯಾಪಕ ಬ್ರಿಜೇಶ್ ಎಂ ಪ್ರಾರ್ಥನೆ ಹಾಡಿದರು.

.jpg)
